Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಮೋತ್‌ ಕಿ ಮಸ್ಜಿದ್‌

ಮೋತ್‌ ಕಿ ಮಸ್ಜಿದ್‌, ದೆಹಲಿ

5

ಮೋತ್‌ ಕಿ ಮಸ್ಜಿದ್‌ ಅಥವಾ ಮಸ್ಜಿದ್‌ ಮೋತ್‌ ಅಂದರೆ ಅಕ್ಷರಶಃ 'ಲೆಂಟಿಲ್‌ ಮಸೀದಿ' ಎಂದಾಗುತ್ತದೆ. ಇದನ್ನು 1505 ರಲ್ಲಿ ನಿರ್ಮಿಸಲಾಗಿದೆ. ಸುಲ್ತಾನ್‌ ಸಿಕಂದರ್‌ ಲೋದಿ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಜಿಯರ್‌ ಮಿಯಾ ಭೋಯಾ ಇದರ ನಿರ್ಮಾತೃ. ಇದನ್ನು ಆತ ಮಸೂರದ ಅವರೆ ಬೇಳೆ ಬೆಳೆದು ಬಂದ ಹಣದಿಂದ ನಿರ್ಮಿಸಿದ್ದ. ಇದರಿಂದಲೇ ಇದಕ್ಕೆ ಮೋತ್‌ ಕಿ ಮಸ್ಜಿದ್‌ ಎಂಬ ಹೆಸರು ಬಂದಿದೆ. ಈ ಅವರೆ ಬೇಳೆಯನ್ನು ರಾಜನಾದ ಸುಲ್ತಾನ್‌ ಸಿಕಂದರ್‌ ಲೋದಿಯು ತನ್ನ ಪ್ರಧಾನಿಗೆ ಕೊಡುಗೆಯಾಗಿ ನೀಡಿದ್ದ.

ಈ ಮಸೀದಿಗೆ ಅಡಿಗಲ್ಲು ಕೂಡ ಸಿಕಂದರ್‌ ಲೋದಿಯೇ ಹಾಕಿದ್ದ. ಅಲ್ಲದೇ ಇದು ಮಿಯಾ ಭೋಯಾ ಅವರ ಖಾಸಗಿ ಮಸೀದಿ ಎಂದು ನಂಬಲಾಗುತ್ತದೆ. ಈ ಮಸೀದಿಯು ಇಂಡೋ-ಇಸ್ಲಾಮಿಕ್‌ ವಾಸ್ತುಶಿಲ್ಪ ಹೊಂದಿ ನಿರ್ಮಾಣವಾಗಿದೆ. ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಮಸೀದಿಯ ಕಿಟಕಿಗಳು ಆಕರ್ಷಕ ವಿನ್ಯಾಸದ ಪರದೆಗಳನ್ನು ಒಳಗೊಂಡಿದೆ.  ಓಟಿಂಗನಲ್‌ ಛಾವಣಿ, ಚಿಕ್ಕ ಅರೆ ವರ್ತುಲಾಕಾರದ ಡೋಮ್‌, ತೆರೆದ ಆರ್ಚ್ ಗಳು, ಎರಡು ಹಂತದ ಟವರ್‌ ಗಳನ್ನು ಇದು ಒಳಗೊಂಡಿದೆ. ಇದರ ಆಕರ್ಷಕ ನೋಟ ಎಲ್ಲರ ಗಮನ ಸೆಳೆಯುತ್ತದೆ.

ದಿಲ್ಲಿಯಲ್ಲಿ ನಿರ್ಮಾಣಗೊಂಡ ಬಹುತೇಕ ಇಸ್ಲಾಮಿಕ್‌ ನಿರ್ಮಾಣಗಳು ಕೆಂಪುಕಲ್ಲನ್ನು ಬಳಕೆ ಮಾಡಿಕೊಂಡಿವೆ. ಇದೂ ಕೂಡ ಅದಕ್ಕೆ ಹೊರತಾಗಿಲ್ಲ. ಇತರೆ ಸಾಂಪ್ರದಾಯಿಕ ಮಸೀದಿಗಳಿಗೆ ಹೋಲಿಸಿದರೆ ಇದು ಯಾವುದೇ ಮಿನಿಯೇಚರ್‌, ವಿಶೇಷ ಅಲಂಕಾರ, ವಾಸ್ತುಶಿಲ್ಪ ಇತ್ಯಾದಿಗಳನ್ನು  ಹೊಂದಿಲ್ಲ. ಆದರೂ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಜನ ಆಗಮಿಸುತ್ತಾರೆ. ಈ ಮಸೀದಿ ನಿತ್ಯ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶ ನೀಡುತ್ತದೆ. ಶುಲ್ಕ ಇಲ್ಲ. ದೇಶ, ವಿದೇಶದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
04 Apr,Sat
Return On
05 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
04 Apr,Sat
Check Out
05 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
04 Apr,Sat
Return On
05 Apr,Sun