Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಇಂದಿರಾ ಗಾಂಧಿ ಮ್ಯೂಸಿಯಂ

ಇಂದಿರಾ ಗಾಂಧಿ ಮ್ಯೂಸಿಯಂ, ದೆಹಲಿ

4

ದಿಲ್ಲಿಯಲ್ಲಿ ನೋಡಲೇಬೇಕಾದ ಪ್ರಮುಖ ತಾಣಗಳಲ್ಲಿ ಇಂದಿರಾಗಾಂಧಿ ಮ್ಯೂಸಿಯಂ ಕೂಡ ಒಂದು. ಇದು ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಅಧಿಕೃತ ಗೃಹ ಕಚೇರಿಯಾಗಿತ್ತು. ಇದೇ ಇಂದು ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂ ಆಗಿದೆ. ಇದೊಂದು ಅತ್ಯಂತ ಕುತೂಹಲಕಾರಿ ಹಾಗೂ ವಿಶೇಷ ತಾಣವಾಗಿ ಜನಪ್ರಿಯವಾಗಿದೆ. ರಾಷ್ಟ್ರೀಯ ಮಟ್ಟದ ಅನೇಕ ಪ್ರಮುಖ ಘಟ್ಟಗಳ ಹಾಗೂ ಸನ್ನಿವೇಶಗಳ ಛಾಯಾಚಿತ್ರಗಳ ಸಂಗ್ರಹ ಇಲ್ಲಿದೆ.

ಇಂದಿರಾಗಾಂಧಿಯವರು ಖಾಸಗಿ ಬಳಕೆಯ ವಸ್ತುಗಳು ಇಲ್ಲಿವೆ. ಅವರ ಛಾಯಾಚಿತ್ರಗಳಿವೆ. ಅವರ ಜೀವನದ ಖಾಸಗಿ ಸನ್ನಿವೇಶಗಳು, ನೆಹರು ಜತೆ ಇವರಿದ್ದ ಸಂದರ್ಭದ ಚಿತ್ರ ಹಾಗೂ ಕೌಟುಂಬಿಕ ಛಾಯಾಚಿತ್ರಗಳ ಸಂಗ್ರಹವಿದೆ. ಇದು ದಿಲ್ಲಿಯ ಅತ್ಯಂತ ಜನಪ್ರಿಯ ತಾಣವಾದ ಸಪ್ದರ್‌ಜಂಗ್‌ ರಸ್ತೆಯಲ್ಲಿದೆ. ಈ ಮೇಲಿನ ಸಂಗ್ರಹಗಳಿಂದ ಮಾತ್ರ ಇದು ಜನಪ್ರಿಯವಾಗಿಲ್ಲ. ಬದಲಾಗಿ ಇದು ಮಾಜಿ ಪ್ರಧಾನಿ ಇಂದಿರಾಜಿ ಅವರ ಖಾಸಗಿ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಹಾಗೂ ಬೇಂಟ್‌ ಸಿಂಗ್‌ರ ಗುಂಡಿನ ದಾಳಿಗೆ ಒಳಗಾದ ತಾಣವೂ ಆಗಿದೆ. ಇದು 1984 ರ ಅ.31ರಂದು ನಡೆದ ಘಟನೆಯಾಗಿದೆ. ಇದು ಈಗ ಅತ್ಯಂತ ಜನಪ್ರಿಯ ಹಾಗೂ ಆಕರ್ಷಣೆಯ ಪ್ರವಾಸಿತಾಣವಾಗಿ ಅಭಿವೃದ್ಧಿ ಹೊಂದಿದೆ. ಇಲ್ಲಿ ಇಂದಿರಾ ಗಾಂಧಿ ಅವರ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಅವರು ತೊಟ್ಟಿದ್ದ ಸೀರೆ, ಚಪ್ಪಲಿ, ಬ್ಯಾಗ್‌ ಮತ್ತಿತರ ವಸ್ತುಗಳನ್ನು ಜೋಪಾನವಾಗಿ ಸಂಗ್ರಹಿಸಿ ಇಡಲಾಗಿದೆ. ಇಂದಿಗೂ ಮ್ಯೂಸಿಯಂನಲ್ಲಿ ಹೆಚ್ಚು ಮಂದಿ ವೀಕ್ಷಿಸುವ ವಸ್ತು ಇವೇ ಆಗಿವೆ. ಇಂದಿರಾ ಗಾಂಧಿ ಅವರ ಖಾಸಗಿ ಗ್ರಂಥಾಲಯ, ಒಡವೆ, ಬಾಲ್ಯದ ಛಾಯಾಚಿತ್ರಗಳು, ಚಿತ್ರಕಲೆ, ಬಾಲ್ಯದಲ್ಲಿ ಬರೆದ ಪತ್ರಗಳು, ಮಹಾತ್ಮ ಗಾಂಧಿ ಅವರೊಂದಿಗಿದ್ದ ಸಂದರ್ಭದಲ್ಲಿ ತೆಗೆಸಿಕೊಂಡ ಖಾಸಗಿ ಛಾಯಾಚಿತ್ರಗಳ ಸಂಗ್ರಹ, ಬಾಲ್ಯದ ಚಿತ್ರಗಳು, ಮಕ್ಕಳು, ಮೊಮ್ಮಕ್ಕಳೊಂದಿಗಿದ್ದ ಚಿತ್ರ, ಅವರ ಶಿಲ್ಪ, ಕಣ್ಣು ದಾನಕ್ಕೆ ಇವರು ಸಹಿ ಮಾಡಿದ್ದ ಕಾರ್ಡ್ ಹಾಗೂ ಇನ್ನಿತರ ವಸ್ತುಗಳಿವೆ. ಇದಲ್ಲದೇ ಇಲ್ಲಿಯೇ ಕೆಲ ಕೋಣೆಗಳಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಸಂಬಂಧಿಸಿದ ಚಿತ್ರಗಳೂ ಇವೆ. ಇವರು ಕೂಡ 1991ರಲ್ಲಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ.

ಈ ವಸ್ತುಸಂಗ್ರಹಾಲಯವು ಸಾರ್ವಜನಿಕ ವೀಕ್ಷಣೆಗೆ ಸೋಮವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat