Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರ

ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರ, ದೆಹಲಿ

2

ಅಧಿಕೃತ ಸಾಂಸ್ಕೃತಿಕ ಚಟುವಟಿಕೆ ತಾಣ ಎಂದು ದಿಲ್ಲಿಯಲ್ಲಿ ಜನಪ್ರಿಯವಾಗಿದೆ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರ. 1968 ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಈ ತಾಣವನ್ನು ಐಐಸಿ ಅಂತಲೂ ಕರೆಯಲಾಗುತ್ತದೆ. ಇದೊಂದು ಚರ್ಚಾ ಕೇಂದ್ರವಾಗಿ, ಸಭೆ ನಡೆಸುವ ತಾಣವಾಗಿ ಜನಪ್ರಿಯವಾಗಿದೆ. ಬರಹಗಾರರಿಂದ ವಿಜ್ಞಾನಿಗಳವರೆಗೆ, ನ್ಯಾಯಶಾಸ್ತ್ರ ಪಂಡಿತರಿಂದ ಬೌದ್ಧಿಕ ವಿಷಯಗಳನ್ನು ಚರ್ಚಿಸುವವರ ಪಾಲಿಗೆ ಇದು ಆಯ್ಕೆಯ ಪ್ರಶಸ್ತ ತಾಣ. ಅಭಿನಯ ಹಾಗೂ ಸಭೆ ನಡೆಸುವ ಸ್ಥಳವಾಗಿಯೂ ಜನಪ್ರಿಯವಾಗಿದೆ. ಯೋಜನೆಗಳನ್ನು ಸಿದ್ಧಪಡಿಸುವವರು ಹಾಗೂ ರಾಯಭಾರಿ ಕಾರ್ಯ ನಿರ್ವಹಿಸುವವರಿಗೆ ಇದು ಹೇಳಿ ಮಾಡಿಸಿದಂತಿದೆ. ತಮ್ಮ ಅನುಭವ, ಯೋಚನೆ, ಉಪಾಯ ಹಾಗೂ ಜ್ಞಾನವನ್ನು ವ್ಯಕ್ತಪಡಿಸಿಕೊಳ್ಳಲು ಹಾಗೂ ಪಸರಿಸಲು ಮತ್ತು ಹೆಚ್ಚಿಸಿಕೊಳ್ಳಲು ಇದು ವೇದಿಕೆಯಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಹಕಾರವೂ ಸಿಗುತ್ತಿರುವುದು ಹೆಮ್ಮೆಯ ಸಂಗತಿ.

ವಿಶ್ವದ ನಾನಾ ಜನಾಂಗದ ಸದಸ್ಯರ ನಡುವೆ ಸಾಮರಸ್ಯ ತರುವ ಉದ್ದೇಶದಿಂದಲೇ ಈ ನಿರ್ಮಾಣವನ್ನು ಇಲ್ಲಿ ಮಾಡಲಾಗಿದೆ. ಇದೇ ನಿಟ್ಟಿನಲ್ಲಿಯೇ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಪೂರಕ ಕಾರ್ಯಕ್ರಮಗಳು, ಚರ್ಚೆ, ಸಭೆ, ತರಬೇತಿ, ತರಗತಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಿನಿಮಾ, ನಾಟಕ, ಕಲೆ, ಸಂಗೀತ, ಪ್ರದರ್ಶನ ಕಲೆ ಇತ್ಯಾದಿಯನ್ನು ಆಯೋಜಿಸಲಾಗುತ್ತದೆ. ವರ್ಷದ ಎಲ್ಲಾ ದಿನವೂ ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸಲು ಬರುವ ಸಾರ್ವಜನಿಕರಿಗೆ ಹಾಗೂ ಪಾಲ್ಗೊಳ್ಳುವವರಿಗೆ ಮುಕ್ತ ಅವಕಾಶ ಇಲ್ಲಿದೆ.

ಇದಲ್ಲದೇ ಇಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಹಕಾರ ಹಾಗೂ ಸೇವೆಗೆ ಈ ತಾಣ ಹೆಸರಾಗಿದೆ. ಇಲ್ಲಿ ಸಾಕಷ್ಟು ವಿಶೇಷ ಸೇವಾ ನಿರತ ಹಾಸ್ಟೆಲ್‌ ಕೋಣೆಗಳಿವೆ. ಇಲ್ಲಿನ ಸೇವೆ ಹಾಗೂ ಸಹಕಾರ ಮನೋಭಾವದಿಂದಾಗಿ ಇವು ಸದಾ ತುಂಬಿ ತುಳುಕುತ್ತಿರುತ್ತವೆ. ಇಲ್ಲಿನ ಇನ್ನೊಂದು ಆಕರ್ಷಣೆ ಹಲವು ಹಸಿರು ಮರಗಳನ್ನು ಒಳಗೊಂಡು ಚಾಚಿ ನಿಂತಿರುವ ಆಕರ್ಷಕ ಉದ್ಯಾನ. ಇಲ್ಲಿಯೇ ಕಾರಂಜಿ, ಚಹಾ ಲಾಂಜ್‌, ಉಪಹಾರ ಮಂದಿರಗಳಿದ್ದು ಅತ್ಯಂತ ಸರಳ ಹಾಗು ಆಕರ್ಷಣೆಯ ಕೇಂದ್ರವಾಗಿ ಗೋಚರಿಸುತ್ತವೆ.

ದಿಲ್ಲಿಗೆ ಭೇಟಿ ನೀಡಿದಾಗ, ಇಲ್ಲಿ ಕೆಲ ಕಾಲ ಇರುವ ಅವಕಾಶ ಒದಗಿ ಬಂದಾಗ ತಪ್ಪದೇ ಈ ತಾಣವನ್ನು ಸಂದರ್ಶಿಸಿ. ಇಲ್ಲಿ ಬೇರೇನೂ ಕೆಲಸ ಇಲ್ಲದಿದ್ದರೂ ಸರಿ ಒಮ್ಮೆ ಬಂದು ಕೆಲ ಕಾಲ ಇದ್ದು ಹೋಗಿ, ಮನಸ್ಸು ನಿರಾಳವಾಗುತ್ತದೆ. ಒಂದು ಬಿಸಿ ಬಿಸಿಯಾದ ಹಬೆಯಾಡುವ ಕಾಫಿ ಕುಡಿದರೆ ಮನಸ್ಸಿಗೆ ಅಪಾರ ಉಲ್ಲಾಸ ಸೇರಿಕೊಳ್ಳುತ್ತದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu