Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಗುರುದ್ವಾರ ಬಂಗಲಾ ಸಾಹಿಬ್‌

ಗುರುದ್ವಾರ ಬಂಗಲಾ ಸಾಹಿಬ್‌, ದೆಹಲಿ

3

ಗುರುದ್ವಾರ ಬಂಗಲಾ ಸಾಹಿಬ್‌ ದಿಲ್ಲಿಯ ಒಂದು ಜನಪ್ರಿಯ ಸಿಕ್‌ ಧಾರ್ಮಿಕ ಆಕರ್ಷಣೆಯ ಕೇಂದ್ರವಾಗಿದೆ. ಕೊನಘಟ್ಟ ಪ್ಯಾಲೇಸ್‌ ಇಲ್ಲಿನ ಪ್ರಮುಖ ಆಕರ್ಷಣೆ ಚಿನ್ನದ ಗೋಪುರ. ಗುರು ಹರಿಕೃಷ್ಣ ಅವರ ಸಹಯೋಗದೊಂದಿಗೆ ಇದನ್ನು ಮರು ನವೀಕರಣಗೊಳಿಸಲಾಗಿದೆ. ಇದಕ್ಕೆ ಎಂಟು ಸಿಕ್‌ ಗುರುಗಳ ಸಹಕಾರ ಸಿಕ್ಕಿದೆ. ಗುರುದ್ವಾದರಲ್ಲಿ ಒಂದು ಜನಪ್ರಿಯ ಕೊಳವಿದ್ದು ಅದನ್ನು 'ಸರೋವರ' ಎಂದು ಕರೆಯಲಾಗಿದೆ. ಇದರಲ್ಲಿರುವ ನೀರನ್ನು ಸಿಕ್‌ ಸಮುದಾಯದವರು 'ಅಮೃತ' ಎಂದು ಪರಿಗಣಿಸಿದ್ದಾರೆ. ಗುರುದ್ವಾರ ಮೂಲತಃ 17ನೇ ಶತಮನಾದಲ್ಲಿ, ಈ ಭಾಗವನ್ನು ಆಳಿದ ಅಂಬರದ ಅರಸನಾದ ರಾಜಾ ಜಯಸಿಂಹನ ಬಂಗಲೆಯಾಗಿತ್ತು. ಇದನ್ನು ಜಯಸಿಂಹಪುರ ಪ್ಯಾಲೇಸ್‌ ಅಂತ ಕರೆಯಲಾಗುತ್ತಿತ್ತು. ಸಿಕ್‌ ಸಮುದಾಯದ ಎಂಟನೇ ಗುರುವಾದ ಹರಿ ಕೃಷ್ಣ ಅವರು 1664 ರಲ್ಲಿ ದಿಲ್ಲಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇದೇ ಬಂಗಲೆಯಲ್ಲಿ ವಾಸವಾಗಿದ್ದರು. ಇದೇ ಸಂದರ್ಭದಲ್ಲಿ ಅತ್ಯಂತ ಮಾರಕವಾದ ಸಾಂಕ್ರಾಮಿಕ ಕಾಯಿಲೆಗಳಾದ ಕಾಲರಾ ಹಾಗೂ ಸ್ಮಾಲ್‌ಪಾಕ್ಸ್‌ಗಳು ನಾಗರಿಕರನ್ನು ಕಾಡಿದವು. ಆಗ ಗುರು ಹರಿಕೃಷ್ಣ ಅವರು ಇದೇ ಪ್ಯಾಲೇಸ್‌ನಲ್ಲಿ ರೋಗಿಗಳನ್ನಿಟ್ಟು ಉಪಚರಿಸಿದ್ದರು. ಪ್ಯಾಲೇಸ್‌ ಆವರಣದಲ್ಲಿರುವ ಬಾವಿ ಅಥವಾ ಕೊಳದಿಂದಲೇ ಶುದ್ಧ ನೀರನ್ನು ರೋಗಿಗಳಿಗೆ ಹಾಗೂ ಜನರಿಗೆ ಕುಡಿಯಲು ನೀಡಿದ್ದರು. ನಿಧಾನವಾಗಿ ಗುರು ಹರಿಕೃಷ್ಣರಿಗೂ ಈ ರೋಗ ಹಿಡಿದು 1664 ರಲ್ಲಿ ಅವರೂ ಇಹಲೋಕ ತ್ಯಜಿಸಿದರು. ನಂತರದ ದಿನಗಳಲ್ಲಿ ರಾಜಾ ಜಯಸಿಂಹ ಇದೇ ಕೊಳದ ಮೇಲೆ ಒಂದು ಟ್ಯಾಂಕ್‌ ನಿರ್ಮಿಸಿದರು. ಇದನ್ನೇ ಮುಂದಿನ ದಿನಗಳಲ್ಲಿ ಸಿಕ್‌ ಸಮುದಾಯ ಪವಿತ್ರ ಜಲವೆಂದು ನಂಬಿದೆ. ಇಂದಿಗೂ ಅದು ಜಾರಿಯಲ್ಲಿದೆ. ವಿಶ್ವದೆಲ್ಲೆಡೆಯಿಂದ ಸಿಕ್ ಸಮುದಾಯದವರು ಈ ಪವಿತ್ರ ನೀರನ್ನು ಈ ಕೊಳದಿಂದಲೇ ಕೊಂಡೊಯ್ಯುತ್ತಾರೆ. ಅನೇಕರು ತಮ್ಮ ಮನೆಯಲ್ಲಿ ಈ ನೀರನ್ನು ಸಂರಕ್ಷಿಸಿ ಇರಿಸಿಕೊಂಡಿದ್ದಾರೆ. ಇಂದಿಗೂ ಈ ನೀರಿನಲ್ಲಿ ಔಷಧಿ ಗುಣವಿದ್ದು, ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಈ ದೇವಾಲಯದ ಆವರಣದಲ್ಲಿಯೇ ಸರೋವರ ಕೂಡ ಇದೆ. ಅಡುಗೆಕೋಣೆ, ಕಲಾ ಗ್ಯಾಲರಿ, ಶಾಲೆ, ಬಾಬಾ ಭಂಗೇಲ ಸಿಂಗ್‌ ಮ್ಯೂಸಿಯಂ, ಆಸ್ಪತ್ರೆ ಹಾಗೂ ಗ್ರಂಥಾಲಯಗಳು ಇವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun