Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಗಾರ್ಡನ್‌ ಆಫ್ ಫೈವ್ ಸೆನ್ಸಸ್(ಐದು ಅರಿವುಗಳ ಉದ್ಯಾನ)

ಗಾರ್ಡನ್‌ ಆಫ್ ಫೈವ್ ಸೆನ್ಸಸ್(ಐದು ಅರಿವುಗಳ ಉದ್ಯಾನ), ದೆಹಲಿ

6

ಐದು ಅರಿವುಗಳ ಗಾರ್ಡನ್‌- ಏಕೆ ಹೀಗೆ ಕರೆಯಲಾಗುತ್ತದೆ ಎಂಬುದನ್ನು ಓದಿ ತಿಳಿಯಿರಿ...

ಒಂದು ಆಕರ್ಷಕ ಉದ್ಯಾನವನ್ನು ಈ ರೀತಿ ಕರೆಯಲಾಗುತ್ತದೆ. ಮನುಷ್ಯನ ಐದು ಅರಿವುಗಳನ್ನು ಇದು ಸೂಚಿಸುತ್ತದೆ. ಕಣ್ಣಿಗೆ ಹಬ್ಬ ನೀಡುವ ಬಹುಬಗೆಯ ಬಣ್ಣದ ಹೂಗಳು, ಗಾಳಿ ಬೀಸುವಾಗ ಉಂಟಾಗುವ ಆಹ್ಲಾದಮಯ ಸಂಗೀತ, ಸೂರ್ಯನ ಬೆಚ್ಚಗಿನ ಅನುಭವ ನೀಡುವ ಬೆಂಚುಗಳು, ಮನರಂಜನೆಗೆ ಒಂದು ಆಂಪಿಥಿಯೇಟರ್‌. ಇವಿಷ್ಟು ಒಂದು ಮನೋಲ್ಲಾಸ ಹಾಗೂ ಮನಸ್ಸಿಗೆ ಉತ್ತಮ ಅನುಭವ ನೀಡುತ್ತದೆ. ಮನಸ್ಸನ್ನು ಹಗುರಾಗಿಸಿಕೊಳ್ಳಲು ಸಹಕರಿಸುತ್ತವೆ.ಐದು ಅರಿವುಗಳ ಗಾರ್ಡನ್‌ ಇರುವುದು ಸೈದುಲ್ಲಾ ಅಜೈಬ್‌ ಎಂಬ ಹಳ್ಳಿಯಲ್ಲಿ. ಹೊಸದಿಲ್ಲಿಯ ಮೆಹ್ರೂಲಿ ಪಾರಂಪರಿಕ ತಾಣದ ಸಮೀಪ ಇದಿದೆ. ಈ ಉದ್ಯಾನ ಸುಮಾರು 20 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ದಿಲ್ಲಿ ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ (ಡಿಟಿಟಿಡಿಸಿ) ಇದರ ನಿರ್ವಹಣೆ ಹೊಣೆ ಹೊತ್ತಿದೆ. 2003 ರಲ್ಲಿ ಇದು ಸಾರ್ವಜನಿಕ ವೀಕ್ಷಣೆಗೆ, ಪ್ರವೇಶಕ್ಕೆ ಮುಕ್ತವಾಗಿದ್ದು, ಇದಕ್ಕಾಗಿ 10.5 ಕೋಟಿ ರೂ. ವ್ಯಯಿಸಲಾಗಿದೆ.

ಇದು ವಾಸ್ತು ಮೂಲದ ಉದ್ಯಾನವಾಗಿದೆ. ಅದಕ್ಕೆ ಪೂರಕವಾದ ವಸ್ತುಗಳನ್ನು ಕೂಡ ಇದು ಹೊಂದಿದೆ. ಇದರ ವಿನ್ಯಾಸ ಹಾಗೂ ಮಾದರಿ ಮುಘಲ್‌ ಮಾದರಿಯನ್ನು ಹೋಲುತ್ತದೆ. ನೀರಿನ ಚಿಕ್ಕ ಕೊಳಗಳಿವೆ. ಬಿದಿರಿನ ಕೋರ್ಟ್ ಇದ್ದು, ಸೋಲಾರ್‌ ವಿದ್ಯುತ್‌ ವ್ಯವಸ್ಥೆಯ ಅಳವಡಿಕೆಯನ್ನು ಒಳಗೊಂಡಿದೆ. ಇದನ್ನು ದಿಲ್ಲಿ ಮೂಲದವರೇ ವಿನ್ಯಾಸಪಡಿಸಿದ್ದಾರೆ. ಇದರಿಂದ ಇಲ್ಲಿನ ಸ್ಥಳೀಯರ ಅಗತ್ಯ, ಬೇಡಿಕೆ, ಅನುಕೂಲಗಳನ್ನು ಇದು ಒಳಗೊಂಡಿದೆ. ಆರಾಮವಾಗಿ ಕುಳಿತುಕೊಳ್ಳಲು, ಪಿಕ್‌ನಿಕ್‌ಗೆ ತೆರಳಲು, ಕುಟುಂಬಸಮೇತರಾಗಿ ಕೆಲ ಹೊತ್ತು ಕಳೆಯಲು ಇದು ಪ್ರಶಸ್ತ ಜಾಗ.

ಇಲ್ಲಿ ಅನೇಕ ಶಿಲ್ಪ ಮಾದರಿಯನ್ನು ನಿಲ್ಲಿಸಲಾಗಿದೆ. ಇದರಲ್ಲಿ ಸ್ಟೀಲಿನಿಂದ ಸಿದ್ಧಪಡಿಸಿದ ಉದ್ದನೇ ಹಕ್ಕಿ, ಕಲ್ಲಿನಲ್ಲಿ ಕೆತ್ತಿದ ಆನೆ, ಸಾಲು ಸಾಲು ಕಾರಂಜಿಗಳು ಹಾಗೂ ಇತ್ಯಾದಿ ಗಮನ ಸೆಳೆಯುವ ಅಂಶಗಳು. ಇದೇ ಉದ್ಯಾನದ ಇನ್ನೊಂದು ಮಗ್ಗುಲಿನಲ್ಲಿ ಆಹಾರ ಮಳಿಗೆಗಳಿವೆ. ನೀವೇ ಇಲ್ಲಿ ಆಗಮಿಸಿದಾಗ ಗಮನಿಸಬಹುದಾದ ಅಂಶವೆಂದರೆ ಜನರ ಇಂದಿನ ಅಗತ್ಯಗಳನ್ನು, ಬೇಕು, ಬೇಡಗಳನ್ನು ಆಧರಿಸಿ ಸೌಲಭ್ಯಗಳನ್ನು ಇಲ್ಲಿ ನೀಡಲಾಗಿದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri