Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಗಾಂಧಿ ಸ್ಮೃತಿ

ಗಾಂಧಿ ಸ್ಮೃತಿ, ದೆಹಲಿ

5

ರಾಷ್ಟ್ರಪಿತ ಮಹಾತ್ಮಾ ಗಾಂಧಿ ತಮ್ಮ ಅಂತಿಮ 144 ದಿನಗಳನ್ನು ಕಳೆದ ಸ್ಥಳವೇ ಗಾಂಧಿ ಸ್ಮೃತಿ ಅಥವಾ ಗಾಂಧಿ ಸ್ಮೃತಿ ಮ್ಯೂಸಿಯಂ. ಇದನ್ನು ಹಿಂದೆ ಬಿರ್ಲಾ ಹೌಸ್‌ ಅಥವಾ ಬಿರ್ಲಾ ಭವನ ಎಂದು ಕರೆಯಲಾಗುತ್ತಿತ್ತು. ಇದೇ ಸ್ಥಳದಲ್ಲಿ ಜನವರಿ 30, 1948 ರಲ್ಲಿ ನಾಥೂರಾಮ್‌ ಗೋಡ್ಸೆಯಿಂದ ಮಹಾತ್ಮಾ ಗಾಂಧಿ ಹತ್ಯೆಯೂ ನಡೆಯಿತು.

1971 ರಲ್ಲಿ ಈ ಕಟ್ಟಡವನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆಯಿತು. ನಂತರ ಏಪ್ರಿಲ್‌ 15, 1973 ರಲ್ಲಿ ಈ ಮನೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ಸ್ಥಳದಲ್ಲಿಯೇ ಸ್ಮಾರಕವನ್ನು ನಿರ್ಮಿಸಲಾಗಿದೆ. ಗಾಂಧೀಜಿಗೆ ಸಂಬಂಧಿಸಿದ ಹಲವು ಸಾಮಗ್ರಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಗಾಂಧೀಜಿಯವರ ಜೀವನ ಚಿತ್ರಣವನ್ನು ಒಳಗೊಂಡ ಫೊಟೋಗಳು ಮತ್ತು ಗಾಂಧೀಜಿಯವರ ಕೆಲವು ಪುಸ್ತಕಗಳೂ ಸೇರಿದಂತೆ ಹಲವು ಸಾಮಗ್ರಿಗಳನ್ನು ಇಲ್ಲಿ ಇಡಲಾಗಿದೆ. ಇದು ಬಿರ್ಲಾ ಕುಟುಂಬದ ಮನೆಯಾಗಿತ್ತು. ದೆಹಲಿಗೆ ಬಂದಾಗಲೆಲ್ಲಾ ಇಲ್ಲಿ ಗಾಂಧೀಜಿಯವರು ಉಳಿದಕೊಳ್ಳುತ್ತಿದ್ದರು. ಮ್ಯೂಸಿಯಂನ ಹೊರಭಾಗದಲ್ಲಿ ಒಂದು ಸ್ತಂಭವಿದ್ದು ಅದರ ಮೇಲೆ ಸ್ವಸ್ತಿಕ್ ಮತ್ತು ಓಮ್‌ ಚಿಹ್ನೆಗಳಿವೆ.

ಗಾಂಧೀಜಿಯವರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದ್ದಲ್ಲಿ ನೀವು ಇಲ್ಲಿಗೆ ಭೇಟಿ ನೀಡಲೇಬೇಕು. ಇಲ್ಲಿನ ಪ್ರಶಾಂತ ವಾತಾವರಣವು ತುಂಬ ಹೊತ್ತಿನವರೆಗೆ ನಿಮ್ಮನ್ನು ಹಿಡಿದಿಡುತ್ತದೆ.

ಈ ಮ್ಯೂಸಿಯಂ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಸೋಮವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಮಾತ್ರ ಮುಚ್ಚಿರುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu