ಫತೇಹ್‌ಪುರಿ ಮಸೀದಿಯು ಚಾಂದನಿ ಚೌಕದ ಪಶ್ಚಿಮ ತುದಿಯಲ್ಲಿದೆ. 1650 ರಲ್ಲಿ ಶಾಹ್‌ಜಹಾನನ ಪತ್ನಿ, ಫತೇಹ್‌ಪುರಿ ಬೇಗಮ್ ಈ ಮಸೀದಿಯನ್ನು ನಿರ್ಮಿಸಿದ್ದಳು.
ಮಸೀದಿಯನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಈ ಏಕ ಗೋಪುರ ಮಸೀದಿಯು ದೆಹಲಿಯಲ್ಲೇ ಅತ್ಯಂತ ವಿಶಿಷ್ಟವಾದದ್ದು. ಹೊರಗಡೆಯಿಂದ ಈ ಮಸೀದಿ ಸಣ್ಣದಾಗಿ ಕಾಣುತ್ತದೆ. ಆದರೆ ಒಳಹೋದ ನಂತರವೇ ನಿಮಗೆ ಅದರ ವೈಶಾಲ್ಯತೆ ಅರ್ಥವಾಗುವುದು.
ಮಸೀದಿಯು ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದ್ದು, ಏಳು ಕಮಾನುಗಳ ಪ್ರವೇಶದ್ವಾರವನ್ನು ಹೊಂದಿದೆ. ಮುಖ್ಯ ಪ್ರವೇಶದ್ವಾರವು ಈ ಏಳು ಕಮಾನುಗಳಲ್ಲೇ ಅತ್ಯಂತ ದೊಡ್ಡದು. ಮಸೀದಿಯ ಎರಡೂ ಕಡೆಗಳಲ್ಲಿ ಎರಡು ಮಳಿಗೆಗಳ ಮತ್ತು ಒಂದು ಮಳಿಗೆಯ ರಚನೆಗಳಿವೆ.
ಮಸೀದಿಗೆ ಮೂರು ಗೇಟ್‌ಗಳಿವೆ. ಕೆಂಪುಕೋಟೆಯ ಕಡೆಗೆ ಇಂದು ಪ್ರವೇಶದ್ವಾರ ಮತ್ತು ಇನ್ನೆರಡು ಉತ್ತರ ಹಾಗೂ ದಕ್ಷಿಣ ಭಾಗಕ್ಕೆ ಇದೆ. ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಾದ ಈದ್-ಉಲ್-ಫಿತರ‍್ ಮತ್ತು ಈದ್-ಉಲ್-ಝುಹಾವನ್ನು ಇಲ್ಲಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ.
ಫತೇಹ್‌ಪುರಿ ಮಸೀದಿಯ ಸಮೀಪದ ಇತರ ಪ್ರಮುಖ ಆಕರ್ಷಣೆಗಳೆಂದರೆ, ಜಾಮಾ ಮಸೀದಿ ಮತ್ತು ಕೆಂಪುಕೋಟೆ. ಏಷ್ಯಾದ ಅತ್ಯಂತ ದೊಡ್ಡ ಮೆಣಸಿನ ಮಾರುಕಟ್ಟೆಯಾಗಿರುವ ಖರಿ ಬವೋಲಿಯು ಕೂಡಾ ಇಲ್ಲಿಗೆ ಸಮೀಪದಲ್ಲೇ ಇದೆ.


Click it and Unblock the Notifications