Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ದೆಲ್ಲಿ ರಿಡ್ಜ್

ದೆಲ್ಲಿ ರಿಡ್ಜ್, ದೆಹಲಿ

2

ದಿಲ್ಲಿ ರಿಡ್ಜ್ ಅಥವಾ ಕೇವಲ ರಿಡ್ಜ್ ಎಂಬುದು ದಿಲ್ಲಿಯ ಹೈಗ್ರೌಂಡ್‌ ಆಗಿದೆ. ಸುಗಮ ಪ್ರವೇಶ ವಿಭಾಗ ಅಂತ ಇದನ್ನು ವಿಸ್ತರಿಸಿ ಹೇಳಬಹುದು. ರಾಜಸ್ಥಾನದ ಮರುಭೂಮಿಯ ಬಿಸಿ ಗಾಳಿಯಿಂದ ತತ್ತರಿಸುವ ದಿಲ್ಲಿ ಜನರಿಗೆ ಆರಾಮವಾಗಿ ಕುಳಿತು, ಗಾಳಿ ಸೇವಿಸಲು, ತಂಪಾದ ವಾತಾವರಣದಲ್ಲಿ ವಿಹರಿಸಲು, ಶುದ್ಧ ಗಾಳಿ ಸೇವನೆಗೆ, ಹಸಿರು ಸಿರಿಯ ದರ್ಶನಕ್ಕೆ ಇದು ಹೇಳಿ ಮಾಡಿಸಿದ ತಾಣ. ವಿಶ್ವದ ಎರಡನೇ ಅತಿ ದೊಡ್ಡ ಪಕ್ಷಿಗಳ ಆಗರವನ್ನು ಒಳಗೊಂಡ ರಾಜಧಾನಿ ಎಂಬ ಖ್ಯಾತಿಗೆ ದಿಲ್ಲಿ ಪಾತ್ರವಾಗಿದೆ. ಮೊದಲ ಸ್ಥಾನವನ್ನು ಕೀನ್ಯಾದ ರಾಜಧಾನಿ ನೈರೋಬಿ ಪಡೆದಿದೆ. ರಿಡ್ಜ್ ಪ್ರಮುಖವಾಗಿ ಬೃಹತ್‌ ಕಲ್ಲುಗಳಿಂದ ಆವೃತ್ತವಾಗಿರುವ ಪ್ರದೇಶ. ಇದು ಪ್ರಮುಖ ನಾಲ್ಕು ವಿಭಾಗವಾಗಿ ವಿಂಗಡಣೆಯಾಗಿದೆ. ಇದರ ಕಾರ್ಯನಿರ್ವಹಣೆಗಾಗಿ ಇದನ್ನು ಈ ರೀತಿ ವಿಭಾಗಿಸಲಾಗಿದೆ. ಹಳೆ ದಿಲ್ಲಿ ಉತ್ತರ ರಿಡ್ಜ್‌, ಹೊಸ ದಿಲ್ಲಿ ಅಥವಾ ಸೆಂಟ್ರಲ್‌ ರಿಡ್ಜ್‌, ಮೆಹ್ರುಲಿ ಅಥವಾ ದಕ್ಷಿಣ ಕೇಂದ್ರ ರಿಡ್ಜ್ ಹಾಗೂ ತುಗಲಕ್‌ಬಾದ್‌ ಅಥವಾ ದಕ್ಷಿಣ ರಿಡ್ಜ್ ಎಂದು ವಿಭಾಗವಾಗಿದೆ.

ಇದರಲ್ಲಿಯೇ ದಕ್ಷಿಣ ಕೇಂದ್ರ ಭಾಗದ ರಿಡ್ಜ್ ಬಯೋಡೈವರ್ಸಿಟಿ ಪಾರ್ಕ್ ನ ಪ್ರವೇಶದ್ವಾರವೂ ಆಗಿದೆ. ಇಲ್ಲಿನ ಉತ್ತರ ಪಾರ್ಕ್ ರಿಡ್ಜ್ ನಲ್ಲಿ ಸಾಕಷ್ಟು ಆಸಕ್ತಿದಾಯಕ ಸನ್ನಿವೇಶಗಳು ಘಟಿಸಿವೆ. ಇವುಗಳ ಕುರಿತ ಕಿರು ಮಾಹಿತಿ ಇಲ್ಲಿದೆ.

ಅರಾವಳಿ ಬಯೋಡೈವರ್ಸಿಟಿ ಪಾರ್ಕ್: ಸರಿಸುಮಾರು 692 ಎಕರೆ ವಿಶಾಲ ಪ್ರದೇಶಕ್ಕೆ ಆವರಿಸಿಕೊಂಡಿರುವ ಪಾರ್ಕ್ ಇದಾಗಿದೆ. ಈ ಪ್ರದೇಶವು ಮೆಹರುಲಿ- ಮಹಿಪಲ್‌ಪುರ ಮಾರ್ಗ, ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ, ಪಾಲಮ್‌ ರಸ್ತೆ, ರಾಷ್ಟ್ರೀಯ ಹೆದ್ದಾರಿ 8 ಹಾಗೂ ವಸಂತ ವಿಹಾರವನ್ನು ವ್ಯಾಪಿಸಿದೆ. ಈ ಪಾರ್ಕ್ ನಿರ್ವಹಣೆಯ ಹೊಣೆಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿದೆ. ಇದರ ಪ್ರಗತಿ ಹಾಗೂ ನವೀಕರಣಕ್ಕೆ ಸಾಕಷ್ಟು ಹಣ ವಿನಿಯೋಗಿಸಲಾಗಿದೆ.

ಅಶೋಕ ಪಿಲ್ಲರ್‌: ದೇಶದ ಉತ್ತರ ಭಾಗದಾದ್ಯಂತ ಹಬ್ಬಿರುವ ಇದು ಅಶೋಕನ ಸ್ಥಂಬ ಶ್ರೇಣಿಗಳಲ್ಲೊಂದಾಗಿರುವ ಖಂಬಗಳಿವು. ಈ ಪಿಲ್ಲರ್‌ ಮೇಲೆ ಅಶೋಕ ಬರೆಸಿದ ಲಿಪಿಗಳನ್ನು ಕಾಣಬಹುದಾಗಿದೆ. ಉತ್ತರ ಭಾರತದಾದ್ಯಂತ ಈ ಮಾದರಿಯ 19 ಪಿಲ್ಲರ್‌ಗಳಿವೆ. ಇದರಲ್ಲಿ ಎರಡು ದಿಲ್ಲಿ ರಿಡ್ಜ್ ನ ಉತ್ತರ ಭಾಗದಲ್ಲಿದೆ. ಇವು ಮೂಲತಃ ಹರಿಯಾಣದ ಮೀರತ್‌ ಹಾಗೂ ತೋಪ್ರಾನಲ್ಲಿದ್ದವು. ಇದನ್ನು 1356 ರಲ್ಲಿ ಫಿರೋಜ್‌ ಶಾ ತುಘಲಕ್‌ ಅಲ್ಲಿಂದ ದಿಲ್ಲಿಗೆ ತೆಗೆದುಕೊಂಡು ಬಂದ ಎನ್ನಲಾಗುತ್ತದೆ.

ಫ್ಲಾಗ್‌ಸ್ಟಾಪ್‌ ಟವರ್‌: ಈ ನಿರ್ಮಾಣವು ದಿಲ್ಲಿ ವಿಶ್ವವಿದ್ಯಾಲಯ ಆವರಣದಲ್ಲಿದೆ. 1828 ರಲ್ಲಿ ಬ್ರಿಟಿಷ್‌ ಭಾರತೀಯ ಸೇನೆ ಇದನ್ನು ಸ್ಥಾಪಿಸಿದೆ. ಇದು ಒಂದು ಖಂಬವಾಗಿದ್ದು, 1857ರ ಭಾರತೀಯ ದಂಗೆ ಸಮಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. 1857ರಲ್ಲಿ ಕೆಲ ಯುರೋಪಿಯನ್‌ ಕುಟುಂಬಗಳು ಇಲ್ಲಿನ ಕೊಠಡಿಗಳಲ್ಲಿ ವಾಸವಾಗಿದ್ದವು.

ಪಿರ್‌ ಘರೀಬ: ವೀಕ್ಷಣೆಗೆಂದೆ ಈ ರಚನೆಯನ್ನು ನಿರ್ಮಿಸಲಾಗಿದೆ. ಇದು 14ನೇ ಶತಮಾನದಲ್ಲಿ ಬೇಟೆಯ ತಂಗುದಾಣವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇದನ್ನು ಫಿರೋಜ್‌ ಶಾ ತುಘಲಕ್‌ ನಿರ್ಮಿಸಿದ್ದ. ಇದು ಇಂದಿಗೂ ಉತ್ತರ ರಿಡ್ಜ್ ನಲ್ಲಿ ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat