Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಚುನ್ನಮಲ್ ಹವೇಲಿ

ಚುನ್ನಮಲ್ ಹವೇಲಿ, ದೆಹಲಿ

2

ಚುನ್ನಮಲ್ ಹವೇಲಿಯು ಚಾಂದನಿ ಚೌಕ್‌ನಲ್ಲಿ ಅತ್ಯಂತ ಪ್ರಮುಖ ಆಕರ್ಷಣೆ. ವಿಶಾಲವಾದ ಹೊರಾಂಗಣ, ಬೆಲ್ಜಿಯಂ ಗಾಜುಗಳು ಮತ್ತು ಸೂಕ್ಷ್ಮ ಕೆತ್ತನೆಗಳನ್ನು ಇದು ಹೊಂದಿದೆ.

ದೆಹಲಿ ಚಾಂದನಿ ಚೌಕ್‌ನಲ್ಲಿರುವ ಈ ಹವೇಲಿಯನ್ನು ಮೂಲರೂಪದಲ್ಲೇ ಸಂರಕ್ಷಿಸಲಾಗಿದೆ. ಚುನ್ನಮಲ್ ಕುಟುಂಬದ ಕುಡಿಯಾದ ಅನಿಲ್ ಪೆರ್ಶಾದ್ ಇದನ್ನು ಈವರೆಗೂ ಕಾದುಕೊಂಡು ಬಂದಿದ್ದಾರೆ. 1857ರಲ್ಲಿ ದೆಹಲಿಯಲ್ಲೇ ಅತ್ಯಂತ ಶ್ರೀಮಂತ ಎಂದು ಗುರುತಿಸಿಕೊಂಡಿದ್ದವರು ಲಾಲಾ ಚುನ್ನಮಲ್. ಆಗ ನಿರ್ಮಿಸಿದ ಈ ಹವೇಲಿ ದೆಹಲಿಯಲ್ಲೇ ಅತ್ಯಂತ ದೊಡ್ಡದು ಎಂದು ಪರಿಗಣಿಸಲ್ಪಟ್ಟಿತ್ತು.

ಈ ಬೃಹತ್ ಮೂರು ಮಳಿಗೆಯ ಕಟ್ಟಡ ಸುಮಾರು ಒಂದು ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇಲ್ಲಿ ಒಟ್ಟು 128 ಕೋಣೆಗಳಿವೆ. ಇಂದಿಗೂ ಚುನ್ನಮಲ್‌ ಕುಟುಂಬದ ಸದಸ್ಯರು ಇಲ್ಲೇ ವಾಸಿಸುತ್ತಾರೆ. ಈ ಹವೇಲಿಯ ಅಟ್ಟಣಿಗೆಯ ಮೇಲೆ ನಿಂತರೆ ಇಡೀ ಚಾಂದನಿ ಚೌಕ್ ಕಾಣಿಸುತ್ತದೆ. ಹಳೆಯ ದೆಹಲಿ ಪ್ರಾಂತ್ಯದಲ್ಲಿರುವ ಐತಿಹ್ಯಗಳಲ್ಲಿ ಇದೊಂದೇ ಸರಿಯಾಗಿ ನಿರ್ವಹಣೆಗೆ ಒಳಪಟ್ಟಿರುವುದು. ಹವೇಲಿಯ ಡ್ರಾಯಿಂಗ್ ರೂಮಿನಲ್ಲಿರುವ ಶಿಲಾಶಾಸನವು ಹೇಳುವಂತೆ ಈ ಕಟ್ಟದ ನಿರ್ಮಾಣವಾಗಿದ್ದು 1848 ರಲ್ಲಿ, ಹಾಗೆಯೇ ಈ ಹವೇಲಿಯ ಇನ್ನೊಂದು ಭಾಗವನ್ನು 1864 ರಲ್ಲಿ ನಿರ್ಮಿಸಲಾಗಿದೆ.

ಚುನ್ನಮಲ್ ಹವೇಲಿಯ ಸಮೀಪದಲ್ಲಿರುವ ಇತರ ಆಕರ್ಷಣೆಯೆಂರೆ ಹೌಸ್‌ ಖಾಸ್ ಸ್ಮಾರಕಗಳು, ಮೆಹ್ರೌಲಿ ಆರ್ಕಿಯಲಾಜಿಕಲ್ ಪಾರ್ಕ್‌ ಮತ್ತು ಸಾಕೇತ ಮಾಲ್‌ಗಳು.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat