Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಬಹಾಯಿ ಹೌಸ್‌ ಪ್ರಾರ್ಥನಾ ಮಂದಿರ

ಬಹಾಯಿ ಹೌಸ್‌ ಪ್ರಾರ್ಥನಾ ಮಂದಿರ, ದೆಹಲಿ

4

ಹೊಸದಿಲ್ಲಿಯಲ್ಲಿ 1986 ರಲ್ಲಿ ಬಹಾಯಿ ಹೌಸ್‌ ಪ್ರಾರ್ಥನಾ ಮಂದಿರ ಪ್ರವರ್ಧಮಾನಕ್ಕೆ ಬಂತು. ಇದು ಇಲ್ಲಿನ ನೋಡಲೇಬೇಕಾದ ತಾಣಗಳಲ್ಲಿ ಒಂದು. ಪ್ರತಿ ವರ್ಷ ಲಕ್ಷಾಂತರ ಮಂದಿ ಭೇಟಿ ನೀಡುವ ಈ ಸುಪ್ರಸಿದ್ಧ ಪ್ರಾರ್ಥನಾ ಮಂದಿರವು, 'ಲೋಟಸ್‌ ಟೆಂಪಲ್‌' ಎಂದೇ ಜನಪ್ರಿಯತೆ ಸಾಧಿಸಿದೆ. ಈ ಜನಪ್ರಿಯ ಮಂದಿರವು ಬಹಾಪುರದಲ್ಲಿದೆ. ಈ ಪ್ರದೇಶವು ದಿಲ್ಲಿಯ ಅತ್ಯಂತ ಜನಪ್ರಿಯ ಹಾಗೂ ಆಕರ್ಷಣೆಯ ಭಾಗವಾಗಿದೆ. ಈ ಮಂದಿರವು ಭಾರತೀಯ ಉಪ ಖಂಡದ ದೇವಾಲಯಗಳ ತಾಯಿ ಅನ್ನಿಸಿದೆ. ಅತ್ಯಾಕರ್ಷಕ ವಾಸ್ತುಶಿಲ್ಪದಿಂದಾಗಿ ಇದು ಪ್ರಸಿದ್ಧಿ ಹೊಂದಿದೆ. ಈ ದೇವಾಲಯದ ಆಕರ್ಷಣೆ ಎಷ್ಟು ಪ್ರಾಮುಖ್ಯತೆ ಸೆಳೆದಿದೆ ಎಂದರೆ ಇದನ್ನು ಅನೇಕ ಮಾಧ್ಯಗಳು, ಟಿವಿ ವಾಹಿನಿಗಳು ಇದನ್ನು ಕುರಿತು ಚಿತ್ರಲೇಖನ ಹಾಗೂ ಕಾರ್ಯಕ್ರಮ ನೀಡಿವೆ. ಇದರ ವಾಸ್ತುಶಿಲ್ಪವನ್ನೇ ಅಪಾರವಾಗಿ ಕೊಂಡಾಡಿದ್ದಾರೆ. ನಾನಾ ಸಂದರ್ಭದಲ್ಲಿ ಇದರ ಅನೇಕ ವೈಶಿಷ್ಟ್ಯಗಳಿಗೆ ಪ್ರಶಸ್ತಿಗಳು ಕೂಡ ಲಭಿಸಿವೆ.

ಬಹಾಯಿಯ ಇತರೆ ಮಂದಿರಗಳಿಗೆ ಹೋಲಿಸಿದರೆ, ದಿಲ್ಲಿಯ ಈ ಬಹಾಯಿ ಹೌಸ್‌ ಪ್ರಾರ್ಥನಾ ಮಂದಿರವು ಹೆಚ್ಚು ವಿಶಿಷ್ಟವಾಗಿದೆ. ಎಲ್ಲಾ ಧರ್ಮಿಯರಿಗೂ ಇಲ್ಲಿ ಪ್ರವೇಶಾವಕಾಶ ಇದೆ. ನಂಬಿಕೆ ಆಧರಿಸಿ ಪ್ರವೇಶಿಸಬಹುದು. ಇಲ್ಲಿ ಎಲ್ಲಾ ವರ್ಗದ ನಾಗರಿಕರಿಗೂ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ದೊಡ್ಡ ಸಂಖ್ಯೆಯಲ್ಲಿ ಸರ್ವಧರ್ಮೀಯರು ಸೇರುತ್ತಾರೆ ಕೂಡ. ಪ್ರಾರ್ಥನೆ, ಜಪ ಹಾಗೂ ಧರ್ಮಗ್ರಂಥ ಪಠಣವನ್ನು ಆಯಾ ಧರ್ಮೀಯರು ಇಲ್ಲಿ ಮಾಡುತ್ತಾರೆ. ಇಲ್ಲಿ ಧರ್ಮಪ್ರವಚನ ನಡೆಸಲು ಅವಕಾಶ ಇಲ್ಲ. ಧರ್ಮಪ್ರಚಾರವನ್ನು ಕೂಡ ನಿರ್ಬಂಧಿಸಲಾಗಿದೆ.

ಧಾರ್ಮಿಕ ಕೇಂದ್ರದ ಆಕರ್ಷಕ ವಾಸ್ತುಶಿಲ್ಪ ಕುರಿತು ಕಣ್ಣೋಟ

ಇಲ್ಲೊಂದು ಲೋಟಸ್‌ ಟೆಂಪಲ್‌ ಕಟ್ಟುವ ಅಗತ್ಯ ಅಥವಾ ಅನಿವಾರ್ಯ ಏನಿತ್ತು ಅನ್ನುವುದನ್ನು ಹಾಗೂ ಇದರ ಹಿಂದಿರುವ ವಿನ್ಯಾಸ, ಯೋಜನೆಯನ್ನು ಅರಿಯೋಣ. ಬಹಾಯಿಯಲ್ಲಿ ಸಿಕ್ಕಿರುವ ಪ್ರಾಚ್ಯವಸ್ತು ದಾಖಲೆಗಳ ಪ್ರಕಾರ, ಈ ಪ್ರಾರ್ಥನಾ ಮಂದಿರವನ್ನು ಬಹಾಯಿ ಜನಾಂಗದ ನಿರ್ಮಾತೃ ಬಹಾಲಿಲ್ಲಾನ ಪುತ್ರ ಅಬ್ದುಲ್‌ ಬಹಾ ಎಂದು ಹೇಳಲಾಗುತ್ತದೆ. ಇದನ್ನು ಪ್ರಾರ್ಥನಾ ಮಂದಿರವಾಗಿ ಆತ ನಿರ್ಮಿಸಿದ್ದ. ಮಂದಿರದ ಒಳಗೆ ಯಾವುದೇ ಧರ್ಮದ ಚಿತ್ರ ಅಥವಾ ಫಲಕ ಅಥವಾ ಮೂರ್ತಿ ಅಳವಡಿಸುವಂತಿಲ್ಲ. ಯಾವುದೇ ಸೂಚನೆಗಳು, ಮಾರ್ಗದರ್ಶನ ಮಾಹಿತಿಯನ್ನು ನೀಡಲು ಅವಕಾಶ ಇಲ್ಲದ ರೀತಿಯ ವಿನ್ಯಾಸದಲ್ಲಿಯೇ ಇದನ್ನು ನಿರ್ಮಿಸಲಾಗಿದೆ. ದಿಲ್ಲಿಯಲ್ಲಿರುವ ಇತರೆ ಬಹಾಯಿ ಮಂದಿರಗಳಿಗೆ ಹೋಲಿಸಿದರೆ ಲೋಟಸ್‌ ಟೆಂಪಲ್‌ ಅತ್ಯಂತ ಪ್ರಮುಖ ಎನಿಸಿದೆ.ಈ ಮಂದಿರವು ಜನಪ್ರಿಯ ಪುಷ್ಪವಾದ ಕಮಲವನ್ನು ಪ್ರತಿನಿಧಿಸುವ ರೀತಿಯಲ್ಲಿದೆ. ಮಾರ್ಬಲ್‌ ಕಲ್ಲುಗಳಲ್ಲಿ ಅರಳಿದ 27 ದಳಗಳ ಮಾದರಿಯನ್ನು ಇಲ್ಲಿ ನಿರ್ಮಿಸಲಾಗಿದೆ. ಒಂದರ ಹಿಂದೆ ಒಂದರಂತೆ ಮೂರು ಸಾಲುಗಳಲ್ಲಿ ಈ ದಳದ ಮಾದರಿಗಳು ಒಂಬತ್ತು ಭಾಗಕ್ಕೆ ಚಾಚಿಕೊಂಡಿವೆ. ಇಲ್ಲಿನ ಕೇಂದ್ರ ಪ್ರಾರ್ಥನಾ ಸಭಾಂಗಣವು ಅತ್ಯಂತ ವಿಶಾಲವಾಗಿದ್ದು, ಏಕಕಾಲಕ್ಕೆ 2500 ಮಂದಿ ಕೂರ ಬಹುದಾಗಿದೆ. ಇದರ ಪ್ರವೇಶಕ್ಕೆ ಪ್ರತ್ಯೇಕ ಒಂಬತ್ತು ದ್ವಾರಗಳನ್ನು ಕೂಡ ಇರಿಸಲಾಗಿದೆ. ಇವೆಲ್ಲವೂ ಮುಖ್ಯ ಸಭಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತವೆ. ಇದು ಒಟ್ಟು 26 ಎಕರೆ ಭೂಮಿಯಲ್ಲಿ ವ್ಯಾಪಿಸಿಕೊಂಡಿದ್ದು, 40 ಮೀಟರ್‌ ಎತ್ತರವಾಗಿದೆ. ಒಂಬತ್ತು ಕೆರೆಗಳು ಹಾಗೂ ಒಂದಿಷ್ಟು ಉದ್ಯಾನಗಳಿಂದ ಇದು ಇನ್ನಷ್ಟು ಸಿಂಗಾರಗೊಂಡಿದೆ.

ಇದರೊಂದಿಗೆ ಇದರ ನಿರ್ಮಾಣದಲ್ಲಿ ಬಳಕೆಯಾದ ವಿಶಿಷ್ಟ ವಾಸ್ತುಶಿಲ್ಪ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಹಲವೆಡೆಯಿಂದ ಇಲ್ಲಿಗೆ ಜನ ಬರುತ್ತಾರೆ. ಇದರ ನಿರ್ಮಾಣದ ನಂತರ ವಿಶಿಷ್ಟ ಶೈಲಿಗೆ ಅನೇಕ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಇದು ಅನೇಕ ಪುಸ್ತಕಗಳಲ್ಲಿಯೂ ಪ್ರಕಟಗೊಂಡಿದೆ. ಭಾರತೀಯ ಅಂಚೆಯ ಸ್ಟ್ಯಾಂಪ್‌ಗಳಲ್ಲಿ ಇದರ ಚಿತ್ರ ಇದೆ. ಸಂಗೀತ, ಪತ್ರಿಕೆ, ಮ್ಯಾಗಜಿನ್‌, ಟಿವಿ ಕಾರ್ಯಕ್ರಮಗಳಲ್ಲಿ ಬಿತ್ತರಗೊಂಡ ಈ ದೇವಾಲಯವು, ಜನರ ಗಮನವನ್ನು 2001ರಲ್ಲಿ ಸೆಳೆಯಿತು. ಆ ವರ್ಷಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಂದಿ ಭೇಟಿ ನೀಡಿದ ಧಾರ್ಮಿಕ ತಾಣ ಎಂಬ ಖ್ಯಾತಿ ಪಡೆದು ಗಿನ್ನಿಸ್‌ ದಾಖಲೆಗೂ ಭಾಜನವಾಯಿತು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri