ದಾಂಡೇಲಿಯಿಂದ 12 ಕಿ.ಮೀ. ದೂರದಲ್ಲಿರುವ ಕುಳಗಿ ನೈಸರ್ಗಿಕ ಶಿಬಿರಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಟೆಂಟ್ ನಲ್ಲಿ ವಸತಿ ಮಾಡುವ ವ್ಯವಸ್ಥೆ ಇದೆ. ಇಲ್ಲಿ ಹನ್ನೆರಡು ಟೆಂಟ್ ಗಳಿದ್ದು ತಮಗಿಷ್ಟವಾದ ಟೆಂಟ್ ನ್ನು ಪ್ರವಾಸಿಗರು ಬಾಡಿಗೆಗೆ ಪಡೆದುಕೊಳ್ಳಬಹುದು. ಈ ಟೆಂಟ್ ಗಳಿಗೆ ಹಲವಾರು ಪಕ್ಷಿಗಳ ಹೆಸರನ್ನು ಇಟ್ಟಿದ್ದಾರೆ. ಅಲ್ಲದೇ ಪ್ರವಾಸಿಗರು ದಾಂಡೇಲಿ ವನ್ಯಜೀವಿ ಸಂರಕ್ಷಣಾ ವಿಭಾಗದ ಸಿಬ್ಬಂದಿಗಳ ಬಳಿ ವಸತಿ ವ್ಯವಸ್ಥೆಯ ಮಾಹಿತಿ ಪಡೆಯಬಹುದು. ಕುಳಗಿ ನೈಸರ್ಗಿಕ ಶಿಬಿರದ ಹತ್ತಿರದಲ್ಲಿಯೇ ಇರುವ ದಾಂಡೇಲಿ ಅರಣ್ಯವನ್ನೂ ಇಲ್ಲಿ ಪ್ರವಾಸಿಗರು ನೋಡಬಹುದಾಗಿದೆ.


Click it and Unblock the Notifications