ಡಾಲ್‌ಹೌಸಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ ಸುಭಾಷ್ ಬಾವೋಲಿ. ಭಾರತೀಯ ಸ್ವತಂತ್ರ ಸೇನಾನಿ ಸುಭಾಷ್‌ಚಂದ್ರ ಭೋಸ್ ಅವರಿಂದಾಗಿ ಈ ಹೆಸರು ಇದಕ್ಕೆ ಬಂದಿದೆ. 1937ರಲ್ಲಿ ಸುಭಾಷ್‌ಚಂದ್ರರು ಡಾಲ್‌ಹೌಸಿಗೆ ಬಂದಿದ್ದರು. ಆಗ ಇವರ ಆರೋಗ್ಯ ಹದಗೆಟ್ಟಿತ್ತು. ವಿಶ್ರಾಂತಿಗಾಗಿ ಬಂದವರು ಏಳು ತಿಂಗಳು ಇಲ್ಲೇ ಚಿಕಿತ್ಸೆ ಪಡೆದಿದ್ದರು. ಈ ಭಾಗದಲ್ಲಿರುವ ತೊರೆಯ ನೀರಲ್ಲಿ ಔಷಧಿ ಗುಣವಿದೆ ಎಂದು ನಂಬಲಾಗಿದ್ದರಿಂದ ಅದನ್ನು ಸೇವಿಸಿಯೇ ಅವರು ಗುಣಮುಖರಾದರು ಎನ್ನಲಾಗುತ್ತದೆ. ಇದರಿಂದ ಈ ಸುಂದರ ತಾಣದ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.
ಇಲ್ಲೊಂದು ಕೆರೆಯಿದ್ದು ಇದರ ಪಕ್ಕದಲ್ಲೇ ಒಂದು ಜಲಪಾತ ಇದೆ. ಇದು ಈ ಸ್ಥಳದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅತ್ಯದ್ಭುತ ಕಾಡನ್ನು ಹೊಂದಿರುವ ಈ ಪ್ರದೇಶದ ನೀರು ಕೂಡ ಅತ್ಯಂತ ಶುದ್ಧವಾಗಿದೆ. ಪಾರದರ್ಶಕ ನೀರಿನ ನೋಟ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲೇ ಒಂದು ಚಹದಂಗಡಿ ಇದ್ದು, ಸ್ಥಳೀಯ ಕುರುಕಲು ತಿಂಡಿ ಸಿಗುತ್ತದೆ. ಇದರೊಂದಿಗೆ ಕಳೆಯುವ ಸಮಯ ಅದ್ಭುತ ಅನುಭವ ತಂದುಕೊಡುತ್ತದೆ.


Click it and Unblock the Notifications