Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಸೇಂಟ್‌ ಆಂಡ್ರ್ಯೂಸ್‌ ಚರ್ಚ್

ಸೇಂಟ್‌ ಆಂಡ್ರ್ಯೂಸ್‌ ಚರ್ಚ್, ಡಾಲ್ ಹೌಸಿ

3

ಇಲ್ಲಿರುವ ಸೇಂಟ್‌ ಆಂಡ್ರ್ಯೂಸ್‌ ಚರ್ಚ್, ಚರ್ಚ್ ಆಫ್‌ ಸ್ಕಾಟ್‌ಲ್ಯಾಂಡ್‌ ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಇದನ್ನು 1903 ರಲ್ಲಿ ನಿರ್ಮಿಸಲಾಗಿದೆ. ಇದು 100 ವರ್ಷಕ್ಕೂ ಹಳೆಯದಾದ ಚರ್ಚ್ ಆಗಿದೆ. ಆದರೂ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ಡಾಲ್‌ಹೌಸಿಯ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದೆಂದು ಇಂದಿಗೂ ಹೆಸರು ಮಾಡಿದೆ. ಚರ್ಚ್ ಮೂಲಗಳು ಇಲ್ಲಿನ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿವೆ. ಹೊರಗಿನಿಂದ ಯಾವುದೇ ದಾಳಿ ಅಥವಾ ಹಲ್ಲೆಯಿಂದ ಚರ್ಚ್ ಗೆ ಹಾನಿಯಾಗದಿರಲಿ ಎಂದು ಆವರಣದ ಸುತ್ತ ಗೋಡೆ ನಿರ್ಮಿಸಿ ರಕ್ಷಿಸಲಾಗಿದೆ. ಪ್ರವೇಶ ದ್ವಾರ ಇಲ್ಲಿ ಸದಾ ಮುಚ್ಚಿರುತ್ತದೆ. ಇಲ್ಲಿಗೆ ಬರುವವರು ಬಲ ಮೂಲೆಯಲ್ಲಿರುವ ಪ್ರಮುಖ ತಡೆಗೋಡೆ ಬದಿಯಿಂದಲೇ ಬರಬೇಕು.

ಇಲ್ಲಿ ಸರಿಸುಮಾರು ಒಂದು ಗಂಟೆ ಕಾಲ ಆರಾಮವಾಗಿ ಕಳೆಯಬಹುದು. ಬ್ರಿಟಿಷರ ಕಾಲದ ಆಕರ್ಷಣೆಯನ್ನು ಇದು ಒಳಗೊಂಡಿದೆ. ಡಾಲ್‌ಹೌಸಿಯ ಮುಖ್ಯ ಬಸ್‌ ನಿಲ್ದಾಣದಿಂದ ಸೇಂಟ್‌ ಆಂಡ್ರ್ಯೂಸ್‌ ಚರ್ಚ್ 1.5 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಬಸ್‌ ಮೂಲಕ ಸುಗಮವಾಗಿ ತಲುಪಬಹುದು. ಇಲ್ಲಿರುವುದೆಲ್ಲಾ ವೀಕ್ಷಣಾ ಯೋಗ್ಯ ತಾಣಗಳು. ಇದರಿಂದ ನಿಸರ್ಗ ಪ್ರೇಮಿಗಳು ಚರ್ಚ್ ಆವರಣವನ್ನು ಬಹುವಾಗಿ ಇಷ್ಟಪಡುತ್ತಾರೆ. ಈ ಚರ್ಚ್ ಸಮೀಪದಲ್ಲಿರುವ ಇತರೆ ಆಕರ್ಷಣೆಗಳೆಂದರೆ ಸೇಂಟ್‌ ಜಾನ್ಸ್‌ ಚರ್ಚ್, ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್ ಹಾಗೂ ಸುಭಾಷ್‌ ಬಾವೋಲಿ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu