ಲಕ್ಷ್ಮೀನಾರಾಯಣ ದೇವಾಲಯವು 10 ನೇ ಶತಮಾನದ ನಿರ್ಮಾಣ. ಚಂಬಾ ಪ್ರದೇಶದ ಅತ್ಯಂತ ಹಳೆಯ ನಿರ್ಮಾಣಗಳಲ್ಲಿ ಇದೂ ಒಂದು. ರಾಜಾ ಸಾಹಿಲ್ ವರ್ಮನ್ ಇದನ್ನು ನಿರ್ಮಿಸಿದ. ಆತ ಈ ಭಾಗವನ್ನು 920 ರಿಂದ 940 ರ ನಡುವೆ ಆಳಿದ್ದ. ಈ ದೇವಾಲಯವು ಶಿಖರ ಮಾದರಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ.
ದೇವಾಲಯದಲ್ಲಿ ಆರು ಮಂದಿರಗಳಿವೆ. ಇವು ಹಿಂದು ದೇವರಿಗೆ ಮೀಸಲಾಗಿದೆ. ವಿಷ್ಣು ಹಾಗೂ ಶಿವನ ಆಲಯ ಇದಾಗಿದೆ.ದೇವಾಲಯದ ಮುಖ್ಯ ದೇವರು ವಿಷ್ಣು. ಗಿಲ್ಮೇರ್ ಹೆಸರಿನ ಅಪರೂಪದ ಮಾರ್ಬಲ್ ಶಿಲೆಯಿಂದ ಮೂರ್ತಿಯನ್ನು ಕೆತ್ತಲಾಗಿದೆ. ಇದಲ್ಲದೇ ಇಲ್ಲಿ ಇನ್ನೂ ಅನೇಕ ದೇವರುಗಳ ಮೂರ್ತಿಗಳಿವೆ. ಅವುಗಳಲ್ಲಿ ಗೌರಿ ಶಂಕರ, ರಾಧೆ ಹಾಗೂ ಕೃಷ್ಣನ ಮೂರ್ತಿಗಳು ಪ್ರಮುಖ.


Click it and Unblock the Notifications