ಕಾಲಾತೋಪ್ ವನ್ಯಜೀವಿ ಧಾಮವು ಕಾಲಾತೋಪ್ ಖಜ್ಜೀಯಾರ್ ಧಾಮ ಅಂತಲೂ ಹೆಸರಾಗಿದೆ. ಡಾಲ್‌ಹೌಸಿಯಿಂದ 6 ಕಿ.ಮೀ. ದೂರದಲ್ಲಿದೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ವ್ಯಾಪ್ತಿಗೆ ಇದು ಬರುತ್ತದೆ. 1962 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿ ಈ ಧಾಮವು ಹರಡಿಕೊಂಡಿದೆ. ಈ ಪ್ರದೇಶವು ದಟ್ಟವಾದ ದೇವದಾರು ಮರಗಳಿಂದ ಆವೃತ್ತವಾಗಿದೆ. ಇಲ್ಲಿರುವ ಪ್ರಮುಖ ಮರಗಳಲ್ಲಿ ದೇವದಾರು, ನೀಲಿ ಪೈನ್ ಹಾಗೂ ಪಿರ್ ಮರಗಳು ಪ್ರಮುಖವಾಗಿವೆ. ಪ್ರಾಣಿ, ಪಕ್ಷಿ ಸೇರಿದಂತೆ ಹಲವು ವಿಧದ ಜೀವಿಗಳು ವಾಸವಾಗಿವೆ. ಈ ಮೂಲಕ ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ಧ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆಯನ್ನು ತಾಣ ಹೊಂದಿದೆ. ಇಲ್ಲಿ ತರಹೇವಾರಿ ಚಿರತೆಗಳು, ಕರಡಿ, ಜಿಂಕೆ, ಕಡವೆ, ಲಂಗೂರ್, ಅಳಿಲು, ನರಿ, ತೋಳ, ಹಿಮಾಲಯನ್ ಬ್ಲ್ಯಾಕ್ ಮಾರ್ಟಿನ್ ಇತ್ಯಾದಿ ಜೀವಿಗಳಿವೆ. ಈ ತಾಣವು ಸಾಕಷ್ಟು ವಿಧದ ಪಕ್ಷಿಗಳಿಗೂ ಜನಪ್ರಿಯವಾಗಿದೆ.
ಇಲ್ಲೊಂದು ಸುಂದರ ತೊರೆ ಹರಿದು ಹೋಗಿದೆ. ಇದು ಮುಂದೆ ಸಾಗಿ ರಾವಿ ನದಿಯನ್ನು ಸೇರುತ್ತದೆ. ಪ್ರವಾಸಿಗರನ್ನು ಕನಿಷ್ಠ ಮೂರರಿಂದ ಆರು ಗಂಟೆಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ತಾಣಕ್ಕಿದೆ. ಈ ತಾಣಕ್ಕೆ ಬರಲು ವಿಶೇಷ ಪರವಾನಗಿಯನ್ನು ಪಡೆಯಬೇಕು. ಚಂಬಾ ಜಿಲ್ಲೆಯ ಅರಣ್ಯಾಧಿಕಾರಿಗಳ ಪರವಾನಗಿ ಇರದಿದ್ದರೆ ಧಾಮದ ಒಳಗೆ ಪ್ರವೇಶ ಸಿಗದು. ಮಾರ್ಚ್ ನಿಂದ ಮೇ ಹಾಗೂ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಇಲ್ಲಿಗೆ ಭೇಟಿ ನೀಡುವುದು ಪ್ರಶಸ್ತ.


Click it and Unblock the Notifications