ಡಾಲ್‌ಹೌಸಿಯ ಉತ್ತಮ ತಾಣಗಳಲ್ಲಿ ಇದೂ ಒಂದು. ವಿಹಾರಕ್ಕೆ ಹೇಳಿ ಮಾಡಿಸಿದ ತಾಣ. ಇದು ಸಾಕಷ್ಟು ಅಡ್ಡರಸ್ತೆಗಳಿಂದ ಕೂಡಿದ ರಸ್ತೆಯಾಗಿದೆ. ಗಾಂಧಿ ಚೌಕ ಹಾಗೂ ಸುಭಾಷ್ ಚೌಕವನ್ನು ಇದು ಸಂಪರ್ಕಿಸುತ್ತದೆ. ಒಣ ಹಾಗೂ ಆಹ್ಲಾದಮಯ ವಾತಾವರಣಕ್ಕೆ ಈ ಮಾರ್ಗ ಹೆಸರಾಗಿದೆ. ಈ ಮಾರ್ಗಕ್ಕೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತದೆ. ಈ ಮಾರ್ಗವಾಗಿ ಸಾಗುವವರಿಗೆ ಇದು ಮುದ ಕೊಡುತ್ತದೆ. ಪ್ರವಾಸಿಗರು ಇಲ್ಲಿ ರಾತ್ರಿ ಹೊತ್ತು ಹೊರಗೆ ತೆರಳುವಾಗ ಬ್ಯಾಟರಿ ಹಿಡಿದೇ ತೆರಳುವಂತೆ ಸಲಹೆ ನೀಡಲಾಗುತ್ತದೆ.


Click it and Unblock the Notifications