ಸಮುದ್ರ ಮಟ್ಟದಿಂದ 2755 ಮೀಟರ್ ಎತ್ತರದಲ್ಲಿದೆ ದೈನಕುಂಡ ತಪ್ಪಲು. ಇದು ಡಾಲ್ಹೌಸಿಯ ಅತಿ ಎತ್ತರವಾದ ಬೆಟ್ಟ. ನಗರದಿಂದ 10 ಕಿ.ಮೀ. ದೂರದಲ್ಲಿದೆ. ವೀಕ್ಷಣಾ ಯೋಗ್ಯ ನಿಸರ್ಗದತ್ತ ತಾಣ ಇದು. ಪ್ರವಾಸಿಗರಿಗೆ ವ್ಯಾಲಿಯು 360 ಡಿಗ್ರಿ ಕೋನದ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಬೆಟ್ಟಗಳ ನಡುವಿನಿಂದ ಹಾದುಹೋಗುವ ಗಾಳಿಯ ಸದ್ದು ಅತ್ಯಂತ ಸ್ಪಷ್ಟವಾಗಿ, ಮಧುರವಾಗಿ ಕೇಳಿಸುತ್ತದೆ. ಇದರಿಂದ ಇದನ್ನು ಹಾಡುವ ಗುಡ್ಡ ಅಂತಲೂ ಕರೆಯಲಾಗುತ್ತದೆ.
ಈ ಬೆಟ್ಟದ ತಪ್ಪಲು ವಾಯು ಸೇನಾ ನೆಲೆಯೂ ಹೌದು. ಇಲ್ಲೊಂದು ದೇವಾಲಯವಿದೆ. ಫೋಲಾನಿ ದೇವಿ ದೇಗುಲ ಇದಾಗಿದೆ. ಈ ಭಾಗದ ಒಂದು ಖಾಯಂ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿದೆ. ಟ್ರೆಕ್ಕಿಂಗ್ಗೆ ಕೂಡ ಇಲ್ಲಿ ಅವಕಾಶ ಇದೆ. ನಿಸರ್ಗ ಪ್ರೇಮಿಗಳು ವ್ಯಾಲಿಗುಂಟ ಹಾದು ಬಂದಿರುವ ಟ್ರೆಕ್ಕಿಂಗ್ ಮಾರ್ಗದಲ್ಲಿ ಆಗಮಿಸಬಹುದು. ನದಿಯ ಹರಿವು, ಹಕ್ಕಿಗಳ ನಿನಾದ, ಮರಗಳ ನಡುವಿನಿಂದ ಹಾದು ಬರುವ ಗಾಳಿಯ ಸಂಗೀತ ಖುಶಿ ಕೊಡುತ್ತದೆ. ಕಾಲಾತೋಪ್ ವನ್ಯಜೀವಿ ಧಾಮ ಹಾಗೂ ಗಾಂಧಿ ಚೌಕ್ ಇಲ್ಲಿಗೆ ಸಮೀಪದಲ್ಲಿರುವ ಇತರೆ ಆಕರ್ಷಣೆಗಳು.


Click it and Unblock the Notifications