Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಓಂಕಾರೇಶ್ವರ ದೇವಸ್ಥಾನ

ಓಂಕಾರೇಶ್ವರ ದೇವಸ್ಥಾನ, ಕೊಡಗು

6

ಓಂಕಾರೇಶ್ವರ ದೇವಸ್ಥಾನವು ಮಡಿಕೇರಿಯ ಗುಡ್ಡ ಪ್ರದೇಶದಲ್ಲಿದೆ. ಇದನ್ನು ಶಿವನಿಗೆ ಅರ್ಪಿಸಲಾಗಿದೆ ಮತ್ತು ಇದನ್ನು 1820ರಲ್ಲಿ ರಾಜ ಲಿಂಗದೇವರಾಜನಿಗೆ ನಿರ್ಮಿಸಲಾಗಿದೆ. ಈ ದೇವಸ್ಥಾನವು ಇಸ್ಲಾಮಿಕ್‌ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಕೊಡಗಿನಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಮುಸ್ಲಿಂ ಆಡಳಿತದ ಪರಿಣಾಮವನ್ನು ತೋರಿಸುತ್ತದೆ. ದೇವಸ್ಥಾನದ ಮಧ್ಯದಲ್ಲಿ ಗೋಪುರವಿದ್ದು, ದೇಗುಲದ ಅಂಚಿನಲ್ಲಿ ನಾಲ್ಕು ಸಣ್ಣ ಗೋಪುರವಿದೆ. ದರ್ಗಾ ರಚನೆಯನ್ನು ನೆನಪಿಸುವ ಈ ದೇವಸ್ಥಾನದ ಮಧ್ಯದಲ್ಲಿ ಶಿವ ಲಿಂಗ ಸ್ಥಾಪನೆಯಾಗಿದೆ. ದೇವಸ್ಥಾನಕ್ಕೆ ಒಂದು ನೀರಿನ ಟ್ಯಾಂಕ್‌ ಇದೆ. ಇದರ ಮಧ್ಯದಲ್ಲಿ ಮಂಟಪವಿದ್ದು ಇದಕ್ಕೆ ಸಂಪರ್ಕವಾಗಿ ದೇವಸ್ಥಾನದಿಂದ ದಾರಿಯೂ ಇದೆ. ಓಂಕಾರೇಶ್ವರ ದೇವಸ್ಥಾನವು ಈ ಹೆಸರನ್ನು ಪಡೆದುಕೊಂಡಿದ್ದು ಕಾಶಿಯಿಂದ ರಾಜ ಇಲ್ಲಿಗೆ ಲಿಂಗವನ್ನು ತಂದಿದ್ದರಿಂದಾಗಿ ಎಂದು ಇಲ್ಲಿನ ಜನ ನಂಬುತ್ತಾರೆ.ತನ್ನ ರಾಜಕೀಯ ಉದ್ದೇಶಕ್ಕಾಗಿ ರಾಜನು ಬ್ರಾಹ್ಮಣನೊಬ್ಬನನ್ನು ಕೊಲ್ಲುತ್ತಾನೆ. ಅವನು ನಂತರದಲ್ಲಿ ತನ್ನ ಅಸಮಾಧಾನವನ್ನು ತೋಡಿಕೊಳ್ಳಲು ಪ್ರಯತ್ನಿಸಿದ. ಈ ದೇವಸ್ಥಾನವು ಸಿಗುವವರೆಗೂ ಆ ಶಕ್ತಿಯೇ ನಂತರದಲ್ಲಿ ಬ್ರಹ್ಮರಾಕ್ಷಸನಾಯಿತು. ನಂತರದಲ್ಲಿ ಇಲ್ಲಿ, ಮೂರ್ತಿಯನ್ನು ಸ್ಥಾಪಿಸಲಾಯಿತು ಎಂದು ಐತಿಹ್ಯ ಹೇಳುತ್ತದೆ.ದೇವಸ್ಥಾನದ ಪ್ರವೇಶದ್ವಾರದ ಮೇಲೆ ತಾಮ್ರದ ತಟ್ಟೆಯಲ್ಲಿ ಶಾಸನಗಳನ್ನು ಬರೆಯಲಾಗಿದೆ. ಇಸ್ಲಾಮಿಕ್‌ ಮತ್ತು ಹಿಂದೂ ವಾಸ್ತುಶಿಲ್ಪ ಶೈಲಿಯು ಇಲ್ಲಿ ಸಮ್ಮಿಳಿತಗೊಂಡಿರುವ ಈ ಗುಣದಿಂದಾಗಿ ಹಿಂದೂ ದೇವಾಲಯವು ವಿಶಿಷ್ಟವಾಗಿ ಕಾಣುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat