ಬ್ರೂಕ್‍ಫೀಲ್ಡ್ಸ್ ಮಾಲ್ ಕೊಯಮತ್ತೂರಿನಲ್ಲಿರುವ ಒಂದು ಶಾಪಿಂಗ್ ಮಾಲ್ ಆಗಿದೆ. ಈ ಮಾಲ್ ಕೊಯಮತ್ತೂರಿನಲ್ಲಿರುವ ದೊಡ್ಡ ಮಾಲ್‍ಗಳಲ್ಲಿ ಒಂದಾಗಿದೆ. ಬ್ರೂಕ್‍ಬಾಂಡ್ ರಸ್ತೆಯಲ್ಲಿರುವ ಈ ಮಾಲ್ 2009ರಲ್ಲಿ ಪ್ರಾರಂಭವಾಯಿತು. ಇದು ಈ ನಗರದಲ್ಲಿ ಅತ್ಯಂತ ಚಟುವಟಿಕೆಯಿಂದ ಕೂಡಿದ ಮಾಲ್ ಆಗಿದೆ.
ಈ ಮಾಲ್ ಬ್ರೂಕ್‍ಫೀಲ್ಡ್ಸ್ ಎಸ್ಟೇಟ್ಸ್ ಪ್ರೈ. ಲಿ. ರವರ ಕನಸಿನ ಕೂಸು. ಇವರು ಕೇವಲ ಇದರ ಪರಿಕಲ್ಪನೆಯನ್ನು ಮಾತ್ರ ಮಾಡದೆ, ಇದರ ನಿರ್ಮಾಣದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಮಾಲ್ ಹಂತ ಹಂತವಾಗಿ ಪ್ರಾರಂಭಗೊಂಡರು, ಇಂದು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಮಾಲ್ ಪ್ರಸಿದ್ಧಿಯಾಗಲು ಕಾರಣ ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‍ಗಳ ವಸ್ತುಗಳು ಲಭ್ಯವಿವೆ. ಗ್ರಾಹಕರಿಗೆ ಇಲ್ಲಿ ಕೊಳ್ಳಲು ವೈವಿಧ್ಯಮಯವಾದ ವಸ್ತುಗಳು ದೊರೆಯುತ್ತವೆ. ಇದರ ಜೊತೆಗೆ ಆರು ತೆರೆಗಳ ಮಲ್ಟಿಫ್ಲೆಕ್ಸ್ ಮತ್ತು ದೇಶ, ವಿದೇಶದ ತಿನಿಸುಗಳನ್ನು ಒದಗಿಸುವ ಫುಡ್‍ಕೋರ್ಟ್ ಸಹ ಇದೆ. ಮಕ್ಕಳು ಮತ್ತು ವಯಸ್ಕರಿಗೆ ಇಲ್ಲಿ ಗೇಮ್ ಝೋನ್ ಸಹ ತೆರೆಯಲಾಗಿದೆ. ಅಲ್ಲದೆ ಮಾಲ್‍ನಲ್ಲಿ ಮಲ್ಟಿ ಸ್ಟೋರಿ- ಸ್ಟೋರಿ ಪಾರ್ಕಿಂಗ್, ವೈ- ಫೈ ಸಂಪರ್ಕ ಮತ್ತು ಎ.ಟಿ. ಎಂ ಸೌಲಭ್ಯಗಳು ಸಹ ಉಂಟು.


Click it and Unblock the Notifications