Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು » ಬ್ಲಾಕ್ ಥಂಡರ್ ಥೀಮ್ ಪಾರ್ಕ್

ಬ್ಲಾಕ್ ಥಂಡರ್ ಥೀಮ್ ಪಾರ್ಕ್, ಕೊಯಮತ್ತೂರು

3

ಮೇಟ್ಟುಪಾಳಯಂನಲ್ಲಿರುವ ಬ್ಲಾಕ್ ಥಂಡರ್ ಒಂದು ಅಮ್ಯೂಸ್‍ಮೆಂಟ್ ( ಮನೋರಂಜನೆಯ ಪಾರ್ಕ್) ಮತ್ತು ಥೀಮ್ ಪಾರ್ಕ್ ಆಗಿದ್ದು, ಕೊಯಮತ್ತೂರಿನಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಅಮ್ಯೂಸ್‍ಮೆಂಟ್ ಪಾರ್ಕನ್ನು 75 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಪಾರ್ಕಿನಲ್ಲಿ ಸುಮಾರು 49 ಬಗೆಯ ರೋಮಾಂಚಕಾರಿ ಮತ್ತು ವಿನೋದದಿಂದ ಕೂಡಿದ ಸವಾರಿಗಳನ್ನು( ರೈಡ್) ನೀವು ಮಾಡಬಹುದು. ಇವುಗಳಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವುದು ವೈಲ್ಡ್ ರಿವರ್ ರೈಡ್ ಮತ್ತು ಸರ್ಫ್ ಹಿಲ್ ಎಂಬ ಆಟಗಳಾಗಿವೆ.

ಈ ಪಾರ್ಕಿನ ಆವರಣದಲ್ಲಿ ಒಂದು ಹೋಟೆಲ್ ಇದೆ. ರಾತ್ರಿಯ ಹೊತ್ತು ಇಲ್ಲಿ ತಂಗಲು ಸಹ ಅವಕಾಶವಿದೆ. ಹಲವಾರು ಜನರು ಈ ಹೋಟೆಲ್‍ನಲ್ಲಿ ತಂಗಲು ಬಯಸುತ್ತಾರೆ. ಏಕೆಂದರೆ ಇಲ್ಲಿ ಆಟಗಳಷ್ಟೇ ಅಲ್ಲದೇ ನೋಡಲು ಅದ್ಭುತವಾದ ಪ್ರಕೃತಿ ಸೌಂದರ್ಯ ಸಹ ಇದೆ.

ಈ ಪಾರ್ಕನ್ನು ನೀಲಗಿರಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ನೀವು ನೀಲಗಿರಿಯ ಭವ್ಯ ವಿಹಂಗಮ ನೋಟವನ್ನು ನೋಡಿ ಆನಂದಿಸಬಹುದು. ಅಲ್ಲದೆ ಇಲ್ಲಿಂದ ನೀಲಗಿರಿ ಬೆಟ್ಟದ ಮೇಲೆ ಇರುವ ಟೀ ಮತ್ತು ಕಾಫಿ ತೋಟಗಳ ಸೌಂದರ್ಯವನ್ನು ಸಹ ಸವಿಯಬಹುದು. ಈ ತೋಟಗಳು ಇಲ್ಲಿನ ಪರಿಸರಕ್ಕೆ ತಮ್ಮದೇ ಆದ ಮೆರಗನ್ನು ಒದಗಿಸಿರುವುದನ್ನು ನೀವು ಕಾಣಬಹುದು. ಈ ಪಾರ್ಕಿಗೆ ಪ್ರವೇಶ ದರವು ಹತ್ತು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ 450 ರೂಪಾಯಿ ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 400 ರೂಪಾಯಿ ಇರುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue