Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಹವಾಮಾನ

ಕೊಯಮತ್ತೂರು ಹವಾಮಾನ

ಕೊಯಮತ್ತೂರಿಗೆ ಭೇಟಿಕೊಡಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಅತ್ಯುತ್ತಮ ಕಾಲವಾಗಿರುತ್ತದೆ. ಆಗ ಇಲ್ಲಿನ ವಾತಾವರಣವು ಹಿತವಾಗಿರುತ್ತದೆ. ಸ್ಥಳ ವೀಕ್ಷಣೆ ಮತ್ತು ಪ್ರವಾಸಗಳನ್ನು ಕೈಗೊಳ್ಳಲು ದಿನದ ವೇಳೆ ಆಹ್ಲಾದಕರವಾಗಿದ್ದು, ಸಹಕರಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ತಂಪಾದ ಗಾಳಿ ಬೀಸುತ್ತಿರುತ್ತದೆ.ಆಲ್ಲದೆ ಸಂಜೆಗಳು ಸಹ ಆಹ್ಲಾದಕರವಾಗಿರುತ್ತವೆ. ಆದರೆ ಸಂಜೆಯ ಹೊತ್ತು ಹಾಕಿಕೊಳ್ಳಲು ಉಣ್ಣೆಯ ಬಟ್ಟೆಗಳು ಇರಬೇಕಾದುದು ಅತ್ಯಾವಶ್ಯಕ.

ಬೇಸಿಗೆಗಾಲ

ಬೇಸಿಗೆ ಕಾಲವು ಕೊಯಮತ್ತೂರಿನಲ್ಲಿ ಸುಡುವ ಬಿಸಿಲಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್‍ವರೆಗು ಏರಿಕೆಯನ್ನು ಕಂಡಿರುತ್ತದೆ.  ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳು ಇಲ್ಲಿ ಬೇಸಿಗೆಯ ಕಾಲವಾಗಿರುತ್ತವೆ. ಒಂದು ವೇಳೆ ಮಳೆಯು ಬಾರದಿದ್ದರೆ ಜೂನ್ ಮಧ್ಯ ಭಾಗದವರೆಗೆ ಇಲ್ಲಿ ಬಿಸಿಲು ಸುಡುತ್ತಲೆ ಇರುತ್ತದೆ. ಈ ಅವಧಿಯಲ್ಲಿ ಮಧ್ಯಾಹ್ನಗಳು ಭಯಾನಕ ಬಿಸಿಲಿನಿಂದ ಕೂಡಿರುತ್ತವೆ. ಅದಕ್ಕಾಗಿ ಮನೆಗಳ ಒಳಗೆ ಇರುವುದು ಉತ್ತಮ.

ಮಳೆಗಾಲ

ಈ ನಗರದಲ್ಲಿ ಜೂನ್,ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸಾಧರಣದಿಂದ ಹಿಡಿದು ಭಾರೀ ಮಳೆಯವರೆಗು ನಾವು ಕಾಣಬಹುದು. ಅಲ್ಲದೆ ಈ ನಗರದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನೈಋತ್ಯ ಮಾನ್ಸೂನ್‍ನ ಪ್ರಭಾವದಿಂದಾಗಿ ಜಿಟಿ ಜಿಟಿ ಎಂದು ಸುರಿಯುವ ಮಳೆಯನ್ನು ಸಹ ಕಾಣಬಹುದು. ಒಂದು ವೇಳೆ ಕೊಯಮತ್ತೂರಿಗೆ ಹೋಗಬೇಕಾದಲ್ಲಿ ಈ ಅವಧಿಯಲ್ಲಿ ಅಲ್ಲಿಗೆ ಭೇಟಿಕೊಡದಿರುವುದು ಉತ್ತಮ. ಏಕೆಂದರೆ ಭಾರೀ ಮಳೆಯು ಇಲ್ಲಿ ರಸ್ತೆಗಳನ್ನು ಅಸ್ತ ವ್ಯಸ್ತ ಮಾಡಿ, ಟ್ರಾಫಿಕ್ ಸಮಸ್ಯೆಯನ್ನು ತಂದೊಡ್ಡುತ್ತವೆ.

ಚಳಿಗಾಲ

ಚಳಿಗಾಲವು ಕೊಯಮತ್ತೂರಿನಲ್ಲಿ ಆಹ್ಲಾದಕರ ವಾತಾವರಣವನ್ನು ತಂದು ನೀಡುತ್ತದೆ. ಆಗ ಇಲ್ಲಿ ಕನಿಷ್ಠ ಉಷ್ಣಾಂಶವು 15 ಡಿಗ್ರಿಗಿಂತ ಕೆಳಗೆ ಬರುವುದಿಲ್ಲ ಮತ್ತು ಗರಿಷ್ಠ 30 ಡಿಗ್ರಿಯನ್ನು ದಾಟುವುದಿಲ್ಲ. ಕೆಲವೊಮ್ಮೆ ಈ ಅವಧಿಯಲ್ಲಿ ಸುರಿಯುವ ಮಳೆಯಿಂದಾಗಿ ಇಲ್ಲಿನ ವಾತಾವರಣವು ಸ್ವಲ್ಪ ಕೊರೆಯುವ ಚಳಿಯಿಂದ ಕೂಡಿರುತ್ತದೆ. ಚಳಿಗಾಲವು ಇಲ್ಲಿ ಡಿಸೆಂಬರ್ ನಲ್ಲಿ ಆರಂಭವಾಗಿ ಫೆಬ್ರವರಿಯ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ.