ಪೌರಾಣಿಕ ಹಿನ್ನೆಲೆಯಲ್ಲಿ ಏಕಚಕ್ರಾಪುರ ಎಂಬುದಾಗಿ ಗುರುತಿಸಿಕೊಂಡ ಕೈವಾರ ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿದೆ. ಮಹಾಭಾರತದ ಕಾಲದಲ್ಲಿ ಭೀಮನು ರಾಕ್ಷಸ ಬಕಾಸುರನ್ನು ಇದೇ ಸ್ಥಳದಲ್ಲಿ ಕೊಂದನೆಂಬ ಪ್ರತೀತಿ ಇದೆ. ಅಲ್ಲದೇ ರಾಕ್ಷಸ ಬಕಾಸು ವಾಸಿಸುತ್ತಿದ್ದನೆಂದು ನಂಬಲಾದ ಗುಹೆ ಕೂಡ ಇಲ್ಲಿದೆ. ಸ್ಥಳೀಯರ ಪ್ರಕಾರ ಶಿವರಾತ್ರಿ ಸಮಯದಲ್ಲಿ ಬಕಾಸುರನ ರಕ್ತ ಹನಿ ಹನಿಯಾಗಿ ಇಲ್ಲಿ ಸ್ರವಿಸುತ್ತಿರುತ್ತದೆ ಎನ್ನುತ್ತಾರೆ.ಇಲ್ಲಿ ಪಾಂಡವರು ಇದ್ದರೆಂದು ನಂಬಲಾದ ಐದು ಕುಟೀರಗಳಿವೆ. ಸಂಗೀತ ಕಾರಂಜಿ, ಪ್ರಾಣಿ ಸಂಗ್ರಹಾಲಯ ಚಿಕ್ಕಬಳ್ಳಾಪುರದ ಕೈವಾರದಲ್ಲಿನ ಇನ್ನಿತರ ವಿಶೇಷತೆಗಳು. ಅಮರನಾರಾಯಣ ದೇವಸ್ಥಾನ, ಭೀಮೇಶ್ವರ ದೇವಸ್ಥಾನ, ಯೋಗಿ ನಾರಾಯಣ ಆಶ್ರಮಕ್ಕೆ ಹಲವಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ.


Click it and Unblock the Notifications