ತಿರುನಲ್ಲೂರ್ ಪೆರುಮಾನಮ್ ದೇವಾಲಯವು ಅಚಲಪುರಂ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದು ಚಿದಂಬರಂನಿಂದ 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈಶ್ವರನು ಇಲ್ಲಿನ ಮುಖ್ಯ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ಇದರ ವಿಶೇಷತೆಯೆಂದರೆ ಇಲ್ಲಿನ ಮುಖ್ಯದೇವರಾದ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತಿದೆ. ಆ ಲಿಂಗದ ಸುತ್ತ ಒಂದು ಹಾವು ಸುರುಳಿ ಸುತ್ತಿಕೊಂಡಿದೆ. ಈ ಹಾವನ್ನು ಚಿನ್ನದಿಂದ ತಯಾರಿಸಲಾಗಿದೆ. ಈ ಹಾವು ಲಿಂಗಕ್ಕೆ ರಕ್ಷಣೆ ನೀಡುವ ಭಂಗಿಯಲ್ಲಿ ನಿಂತಿದೆ.
ಇಲ್ಲಿನ ಶಿವನನ್ನು ಶ್ರೀ ಶಿವಲೋಕತ್ಯಾಗೇಶ್ವರ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಶಿವನನ್ನು ಸದಾ ಪಾರ್ವತಿಯ ಜೊತೆಗೆ ಪೂಜಿಸಲಾಗುತ್ತದೆ. ಆಕೆಯನ್ನು ಇಲ್ಲಿ ತಿರುವೇಣಿಟ್ರುಮೈ ಅಮ್ಮೈ ಎಂದು ಪೂಜಿಸಲಾಗುತ್ತದೆ. ಈ ದೇವಾಲಯದ ವಾಸ್ತು ಶಿಲ್ಪವು ತಮಿಳು ದೇವಾಲಯ ವಾಸ್ತುಶಿಲ್ಪಗಳ ಸುವರ್ಣ ಯುಗವೆಂದು ಕರೆಯಲ್ಪಡುವ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಚಿದಂಬರಂನಲ್ಲಿರುವ ಪ್ರತಿಯೊಂದು ದೇವಾಲಯವು ಒಂದೇ ಬಗೆಯ ಸಾಮ್ಯತೆಯನ್ನು ಹೊಂದಿವೆ. ಆದರೆ ಈ ದೇವಾಲಯವು ಮಾತ್ರ ಆ ಪಂಗಡಕ್ಕೆ ಸೇರಿಲ್ಲ. ಈ ದೇವಾಲಯವು ಚಿದಂಬರಂನಿಂದ 8 ಕಿ.ಮೀ ದೂರದಲ್ಲಿ, ಸೀರ್ಕಾಳಿ ಮಾರ್ಗದಲ್ಲಿ ನೆಲೆಗೊಂಡಿದೆ.


Click it and Unblock the Notifications