Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ಹವಾಮಾನ

ಚಿದಂಬರಂ ಹವಾಮಾನ

ಚಿದಂಬರಂಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲವು ಚಳಿಗಾಲವಾಗಿರುತ್ತದೆ. ಇಲ್ಲಿನ ಚಳಿಗಾಲವು ಸಾಮಾನ್ಯವಾಗಿ ತಮಿಳು ನಾಡಿನ ಇತರೆ ಭಾಗಗಳಲ್ಲಿರುವಂತೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶ 20 ಡಿಗ್ರಿ ಹಾಸು ಪಾಸಿನಲ್ಲಿರುತ್ತದೆ. ನವೆಂಬರ್ ಮಧ್ಯಭಾಗದಿಂದ ಫೆಬ್ರವರಿ ಮೊದಲ ಭಾಗದ ನಡುವೆ ಅಂದರೆ ಬೇಸಿಗೆ ಆರಂಭವಾಗುವ ಮೊದಲು ನಾವು ಈ ಕಾಲವನ್ನು ಕಾಣಬಹುದು. ಈ ಸಮಯದಲ್ಲಿ ಇಲ್ಲಿ ಅಸಂಖ್ಯಾತ ಹಬ್ಬಗಳು ಆಚರಿಸಲ್ಪಡುತ್ತವೆ. ಹಾಗಾಗಿ ಈ ದೇವಾಲಯಗಳ ನಗರಿಗೆ ಭೇಟಿ ನೀಡಲು ಇದು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

ಚಿದಂಬರಂ ಎಂಬುದು ವರ್ಷದ ಯಾವುದೇ ಭಾಗದಲ್ಲಿ ಹವಾಮಾನದ ಕುರಿತಾಗಿ ತಲೆ ಕೆಡಿಸಿಕೊಳ್ಳದೆ ಭೇಟಿ ನೀಡಬಹುದಾದ ಸ್ಥಳವಾಗಿದೆ. ಆದರೂ ಸಹ ಬೇಸಿಗೆಕಾಲದಲ್ಲಿ ಚಿದಂಬರಂಗೆ ಭೇಟಿ ನೀಡುವುದು ಒಳ್ಳೆಯದಲ್ಲ. ಏಕೆಂದರೆ ಈ ಅವಧಿಯಲ್ಲಿ ಇಲ್ಲಿ ತಮಿಳುನಾಡಿನ ಇತರ ಭಾಗಗಳಂತೆ ಬಿಸಿಲಿನ ತಾಪಮಾನವು ಅಧಿಕವಾಗಿರುತ್ತದೆ.

ಮಳೆಗಾಲ

ಮಳೆಗಾಲವು ಚಿದಂಬರಂಗೆ ಭೇಟಿ ನೀಡಲು ಪ್ರಶಸ್ತವಾದ ಕಾಲವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಮಳೆಯು ಅತಿಯಾಗಿ ಬೀಳುವುದಿಲ್ಲ. ಹಾಗಾಗಿ ಇಲ್ಲಿಗೆ ಭೇಟಿ ನೀಡಲು ಇದು ಅನುಕೂಲಕರವಾದ ಕಾಲವಾಗಿರುತ್ತದೆ. ಚಿದಂಬರಂ ತಮಿಳುನಾಡಿನ ಇತರ ಭಾಗಗಳಂತೆ ಅತಿಯಾದ ಮಳೆಯನ್ನು ಪಡೆಯುವುದಿಲ್ಲ. ಆದರೆ ಬೇಸಿಗೆಯಲ್ಲಿ ಇಲ್ಲಿನ ಬಿಸಿಲು ಭಯಾನಕವೆನ್ನುವಷ್ಟು ಇರುತ್ತದೆ. ಇಲ್ಲಿನ ಮಳೆಗಾಲವು ಜೂನ್‍ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನವರೆಗೆ ಇರುತ್ತದೆ. ನೈಋತ್ಯ ಮಾನ್ಸೂನ್ ಮಾರುತಗಳ ಪ್ರಭಾವದಿಂದಾಗಿ ಈ ಪಟ್ಟಣವು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಉತ್ತಮ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಚಳಿಗಾಲವು  ಅತ್ಯಂತ ಪ್ರಶಸ್ತವಾದ ಕಾಲವಾಗಿರುತ್ತದೆ. ಆಗ ಇಲ್ಲಿ ಚಳಿಯಿದ್ದು, ಉಷ್ಣಾಂಶವು ತೀರಾ ಕಡಿಮೆಯಾಗಿರುತ್ತದೆ. ಆಗಾಗ ಮಳೆಯು ಸಹ ಈ ಕಾಲದಲ್ಲಿ ಸುರಿಯುತ್ತದೆ. ಆದರೆ ಪ್ರವಾಸಿಗರ ಮೋಜಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಚಿದಂಬರಂನಲ್ಲಿ ಚಳಿಗಾಲವು ನವೆಂಬರ್ ನಲ್ಲಿ ಆರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ.