Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ಆಕರ್ಷಣೆಗಳು » ತಿಲ್ಲೈ ನಟರಾಜರ್ ದೇವಾಲಯ

ತಿಲ್ಲೈ ನಟರಾಜರ್ ದೇವಾಲಯ, ಚಿದಂಬರಂ

7

ತಿಲ್ಲೈ ನಟರಾಜರ್ ದೇವಾಲಯವು ಚಿದಂಬರಂನ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಶೈವರ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ಈ ದೇವಾಲಯವು ದೇಶದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿಗೆ ದೇಶಾ ನಾನಾ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಇಲ್ಲಿನ ಮುಖ್ಯದೇವರನ್ನು ಹಲವಾರು ಸಂತರು ತಮ್ಮ ಸ್ತೋತ್ರಗಳಿಂದ ಹಾಡಿ ಹೊಗಳಿದ್ದಾರೆ. ಇದನ್ನು ಸರಿ ಸುಮಾರು 2 ಸಾವಿರ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಯಿತು ಎಂದು ತಿಳಿದುಬಂದಿದೆ.

ಈ ದೇವಾಲಯವು ತಮಿಳು ನಾಡಿನ ಕಲೆ, ವಾಸ್ತುಶಿಲ್ಪ, ನೃತ್ಯ ಮತ್ತು ಇನ್ನಿತರ ಲಲಿತ ಕಲೆಗಳ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಇದು ನಾವು ನೋಡುತ್ತಿರುವ ದೇವಾಲಯವನ್ನು ಹಲವಾರು ರಾಜ ವಂಶಸ್ಥರು, ಹಲವಾರು ಬಾರಿ ಪುನರ್ ನವೀಕರಣ ಮಾಡಿದ್ದಾರೆ. ಹಾಗಾಗಿ ಈ ದೇವಾಲಯವು ಹಲವಾರು ಸಾಮ್ರಾಜ್ಯಗಳ ಏಳಿಗೆ ಮತ್ತು ಅವನತಿಯನ್ನು ಕಂಡಿದೆ. ಈ ಪ್ರದೇಶವನ್ನು ಆಳಿದ ಪ್ರತಿಯೊಬ್ಬ ರಾಜರುಗಳು ತಮ್ಮ ಛಾಪನ್ನು ಈ ದೇವಾಲಯದ ಮೇಲೆ ಮೂಡಿಸಿದ್ದಾರೆ.

ಇಲ್ಲಿ ಶಿವನನ್ನು ತಿಲ್ಲೈ ಕೂಥನ್ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಪ್ರಮುಖ ಮೂರ್ತಿ ನಟರಾಜ. ಇದು ತಮಿಳು ನಾಡಿನಲ್ಲಿ ಹಂಚಿ ಹೋಗಿರುವ ಪಂಚ ಭೂತ ಸ್ಥಳಗಳಲ್ಲಿ ಒಂದಾಗಿದೆ. ತಿಲ್ಲೈ ನಟರಾಜರ್ ದೇವಾಲಯವು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದೆ. ಹಾಗಾಗಿ ಚಿದಂಬರಂಗೆ ಬರುವ ಪ್ರವಾಸಿಗರಿಗೆ ಇಲ್ಲಿಗೆ ತಲುಪುವುದು ಅಷ್ಟೇನು ಪ್ರಯಾಸಕರವಾಗಿರುವುದಿಲ್ಲ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun