ಈ ದೇವಾಲಯ ಕೊಲುವಾ ಬೆಟ್ಟದ ತುದಿಯಲ್ಲಿ ನೆಲೆಸಿದೆ. ಇದನ್ನು 10 ನೇ ಶತಮಾನದಲ್ಲಿ ಕಟ್ಟಲಾಗಿದೆ ಮತ್ತು ಇದು ಹಿಂದೂ, ಜೈನ ಮತ್ತು ಬೌದ್ಧರ ಪವಿತ್ರ ಯಾತ್ರಾ ಸ್ಥಳವಾಗಿದೆ. ಜಾರ್ಖಂಡ್ ನ ಕೊಯ್ ಜನಾಂಗದಿಂದ ಈ ದೇವಿಯ ಪೂಜೆ ನಡೆಯುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಇದರ ಉಲ್ಲೇಖವಿದೆ.
ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗುವುದೇ ಒಂದು ಟ್ರೆಕಿಂಗ್ ಗೆ ಹೋದ ಅನುಭವ ನೀಡುತ್ತದೆ. ಮಾಘ ವಸಂತ ಪಂಚಮಿ ಮತ್ತು ರಾಮನ ನವಮಿಯಂದು ಖೌಲ ಮೇಳ ಆಚರಿಸಲಾಗುತ್ತದೆ.