Search
  • Follow NativePlanet
Share
ಮುಖಪುಟ » ಸ್ಥಳಗಳು» ಚಂಡಿಪುರ

ಚಂಡಿಪುರ ಪ್ರವಾಸೋದ್ಯಮ : ಇಲ್ಲಿ ಸಮುದ್ರ ಅದೃಶ್ಯವಾಗುತ್ತದೆ

14

ಚಂಡಿಪುರ ಬೀಚ್ ರಿಸಾರ್ಟ್ ಆಗಿದ್ದು ಒರಿಸ್ಸಾ(ಈಗಿನ ಒಡಿಶಾ)ದ ಬಾಲೇಶ್ವರದಲ್ಲಿದೆ. ಇದು ಬಾಲೇಶ್ವರ ರೈಲ್ವೇ ನಿಲ್ದಾಣದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿನ ಸಮುದ್ರ ಆಕರ್ಷಣೀಯವಾಗಿದೆ. ಪ್ರಾಕೃತಿಕ ಅದ್ಭುತವನ್ನು ಇಲ್ಲಿ ಕಾಣಬಹುದಾಗಿದೆ, ಇಲ್ಲಿ ಸಮುದ್ರದ ನೀರು ತೀರದೊಂದಿಗೆ ನಿರಾತಂಕವಾಗಿ ಆಟವಾಡುತ್ತಿರುವಂತೆ ತೋರುತ್ತದೆ. ಒಮ್ಮೆ ಬರಿದಾಗಿರುವ ತೀರ ಮರುಕ್ಷಣದಲ್ಲೆ ನೀರಿನಿಂದ ತುಂಬಿ ಹೋಗಿರುತ್ತದೆ.

ಪ್ರಸಿದ್ದ ಕ್ಷಿಪಣಿ ಪರೀಕ್ಷಾ ಉಡ್ಡಯನ ಕೇಂದ್ರ ಕೂಡಾ ಇಲ್ಲೇ ಇದ್ದು, ಅಗ್ನಿ, ಪೃಥ್ವಿ , ಆಕಾಶ್ ಮತ್ತು ಶೌರ್ಯ ಕ್ಷಿಪಣಿಗಳು ಇಲ್ಲಿಂದಲೆ ಹಾರಿವೆ. ಕ್ಷಿಪಣಿ ಪರೀಕ್ಷಾ ಕೇಂದ್ರದ ರೇಂಜ್ ಭಾಗಕ್ಕೂ ಪ್ರವಾಸಿಗರು ಅಧಿಕಾರಿಗಳ ವಿಶೇಷ ಅನುಮತಿ ಪಡೆದು ಪ್ರವೇಶಿಸ ಬಹುದಾಗಿದೆ. ಇಲ್ಲಿ ಹೆಚ್ಚಿನ ಹೋಟೇಲುಗಳನ್ನು ಸಮುದ್ರದ ಬಳಿ ನಿರ್ಮಿಸಲಾಗಿದ್ದು ಪ್ರವಾಸಿಗರು ಲಕ್ಷುರಿ ಮತ್ತು ನಿರಾಸದಾಯಕವಾಗಿ ಇಲ್ಲಿ ಕಳೆಯಬಹುದಾಗಿದೆ.

ಚಂಡಿಪುರದ ಸುತ್ತಮುತ್ತವಿರುವ ಪ್ರವಾಸಿ ತಾಣಗಳು

ಚಂಡಿಪುರ ಪ್ರವಾಸೋದ್ಯಮ ಹತ್ತಿರದ ಆಕರ್ಷಣೀಯ ಕೇಂದ್ರಗಳಿಂದ ಹೆಸರು ಪಡೆದಿದೆ. ರಾಕ್ಷಸ ಗಾತ್ರದ ಹಸಿರು ದಿನ್ನೆಗಳು, ಪವಿತ್ರ ಪಂಚಲಿಂಗೇಶ್ವರ ಮತ್ತು ರೆಮುನಾದಲ್ಲಿರುವ ಪರಿಶುದ್ದ ಖಿರ್ಚೋರಾ ಗೋಪಿನಾಥ ದೇವಾಲಯ ಚಂಡಿಪುರದ ಪ್ರಮುಖ ಆಕರ್ಷಣೆ. ಏಕಾಂತವಾಗಿರುವ ಹಳ್ಳಿಗಳು ಪ್ರಮುಖವಾಗಿ ಸಜನ್‍ಗಡ್, ಭಿತರ್ಕಾನಿಕಾದಲ್ಲಿರುವ ವನ್ಯಧಾಮ ಮುಂತಾದವು ಚಂಡಿಪುರಕ್ಕೆ ತುಸು ದೂರವಾದರೂ ಪ್ರವಾಸಿಗರು ಭೇಟಿ ನೀಡಬಹುದಾದ ಸ್ಥಳಗಳಾಗಿವೆ.

ವಿವಿಧ ಪಾಕಶಾಲೆಗಳು

ಚಂಡಿಪುರ ಕರಾವಳಿ ಶೈಲಿಗೆ ಹೆಸರುವಾಸಿ. ಪ್ರವಾಸಿಗರು ರುಚಿರುಚಿಯಾದ ಮತ್ತು ಭಾರಿ ನೀರೂರಿಸುವ ಪ್ರಾನ್ ಅಡುಗೆಯ ಊಟವನ್ನು ಚಂಡಿಪುರದ ಹೋಟೇಲಿನಲ್ಲಿ ಸವಿಯಬಹುದಾಗಿದೆ. ಹಾಗೆಯೇ ಹೆಸರುವಾಸಿಯಾಗಿರುವ ಸಿಹಿ ತಿನಸುಗಳನ್ನು ತಿನ್ನಲೂ ಪ್ರವಾಸಿಗರು ಮರೆಯಬಾರದು.

ಚಂಡಿಪುರ ತಲುಪುವುದು ಹೇಗೆ

ಬಾಲೇಶ್ವರ ರೈಲು ನಿಲ್ದಾಣದಿಂದ ಚಂಡಿಪುರ ತಲುಪಬಹುದು. ಅಲ್ಲಿಂದ ಟ್ಯಾಕ್ಸಿ, ಆಟೋರಿಕ್ಷಾವನ್ನು ಬಾಡಿಗೆ ಪಡೆದು ಚಂಡಿಪುರ ತಲುಪಬಹುದು.

ಚಂಡಿಪುರದ ವಾತಾವರಣ

ಚಂಡಿಪುರ ಪ್ರವಾಸೋದ್ಯಮ ಚಳಿಗಾಲದಲ್ಲಿ ಅತ್ಯಂತ ಸೂಕ್ತ. ಈ ಸಮಯದಲ್ಲಿ ಸಮುದ್ರದ ಕಡೆಯಿಂದ ಬೀಸುವ ತಣ್ಣಗಿನ ಗಾಳಿ ಪ್ರವಾಸಿಗರಿಗೆ ಹೊಸ ಲೋಕದಲ್ಲಿ ತೇಲಾಡುತ್ತಿರುವ ಅನುಭವ ನೀಡುತ್ತದೆ.

ಚಂಡಿಪುರ ಪ್ರಸಿದ್ಧವಾಗಿದೆ

ಚಂಡಿಪುರ ಹವಾಮಾನ

ಉತ್ತಮ ಸಮಯ ಚಂಡಿಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಂಡಿಪುರ

  • ರಸ್ತೆಯ ಮೂಲಕ
    ಚಂಡಿಪುರ ತಲುಪಲು ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದ ಪ್ರಮುಖ ನಗರಗಳಿಂದ ಹಲವು ಬಸ್ ಸೌಲಭ್ಯಗಳಿವೆ. ಪೂರ್ವ ಭಾರತದಲ್ಲಿ ಚಂಡಿಪುರ ಹೆಸರುವಾಸಿಯಾಗಿರುವುದರಿಂದ , ಪ್ಯಾಕೇಜ್ ಬಸ್ ಮತ್ತು ಟ್ಯಾಕ್ಸಿ ಸೌಲಭ್ಯವೂ ಲಭ್ಯವಾಗುತ್ತದೆ. ಪಮುಖ ನಗರಗಳಿಂದ ಇಲ್ಲಿಗೆ ತಲುಪಲು ರಸ್ತೆಯು ಉತ್ತಮವಾಗಿರುವುದರಿಂದ ಪ್ರಯಾಣವು ಆರಾಮದಾಯಕ ವಾಗಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಂಡಿಪುರಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಬಾಲೇಶ್ವರ ರೈಲ್ವೇ ನಿಲ್ದಾಣ. ದೇಶದ ಎಲ್ಲಾ ಪ್ರಮುಖ ರೈಲು ಜಂಕ್ಷನ್ ಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ. ಹೀಗಾಗಿ ದೇಶದ ಎಲ್ಲಾ ಭಾಗದ ಜನತೆ ಬಾಲೇಶ್ವರ ರೈಲು ನಿಲ್ದಾಣ ತ್ರಾಸವಿಲ್ಲದೇ ತಲುಪಬಹುದು. ಇಲ್ಲಿಂದ ನಲವತ್ತು ನಿಮಿಷದ ಪ್ರಯಾಣದ ಮೂಲಕ ಚಂಡಿಪುರ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚಂಡಿಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರ, ಇದು 230 ಕಿಲೋಮೀಟರ್ ದೂರದಲ್ಲಿದೆ. ಚಂಡಿಪುರ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ವಿಮಾನ ನಿಲ್ದಾಣದ ಮೂಲಕವೂ ಇಲ್ಲಿಗೆ ತಲುಪಬಹುದು. ಅದು ಚಂಡಿಪುರದಿಂದ 314 ಕಿಲೋಮೀಟರ್ ದೂರದಲ್ಲಿದೆ. ಟ್ಯಾಕ್ಸಿ ಮತ್ತು ಬಸ್ಸುಗಳು ಎರಡೂ ವಿಮಾನ ನಿಲ್ದಾಣದಿಂದ ಬಾಡಿಗೆ ಪಡೆದು ಚಂಡಿಪುರ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue