ಚಂಡಿಪುರ ಬೀಚ್ ಚಂಡಿಪುರದ ಆಕರ್ಷಣೀಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿದೆ. ಈ ಸಂಕೇತ ಗರ್ಭಿತ ಬೀಚ್ ಪ್ರಾಕೃತಿಕ ಅದ್ಭುತ. ಸಮುದ್ರದ ನೀರು ಒಮ್ಮೆ ಹಿಮ್ಮೆಟ್ಟಿ ನಂತರ ಕೆಲವೇ ಕ್ಷಣದಲ್ಲಿ ನೀರು ಮತ್ತೆ ತುಂಬುತ್ತದೆ, ಇದನ್ನು ಕಣ್ತುಂಬಿಸಿ ಕೊಳ್ಳುವುದು ಸೂಕ್ತ. ಇದನ್ನು ದಿನದ ಎರಡು ಬಾರಿ ವೀಕ್ಷಿಸಬಹುದಾಗಿದೆ. ಇದು ಸಮುದ್ರದ ಏರಿಳಿತದಿಂದ ದಿನದ ಎರಡು ಬಾರಿ ಅಂತರದ ಕಾಲ ಘಟ್ಟದಲ್ಲಿ ವೀಕ್ಷಿಸಬಹುದಾಗಿದೆ. ಸಮುದ್ರದ ಅಬ್ಬರ ಇಳಿದಾಗ ನೀರು ದೂರವಾಗಿ, ಅಬ್ಬರ ಹೆಚ್ಚಾದಾಗ ಮತ್ತೆ ನೀರು ಬೋರ್ಘರೆಯುತ್ತದೆ.
ಮರಳಿನ ಗುಡ್ಡ ಮತ್ತು ಹಸಿರು ಕಾಸುರಿನಾ ಮರಗಳು ಸಮುದ್ರದ ಮಧ್ಯೆ ಇದ್ದು ಚಂಡಿಪುರ ಬೀಚಿನ ವೈಭವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೆಂಪು ಏಡಿಗಳು, ಕುದುರೆ ಕಾಲಿನ ಏಡಿಗಳನ್ನು ಈ ಬೀಚಿನಲ್ಲಿ ಕಾಣಬಹುದಾಗಿದೆ.