ಚಂದೀಗಢ್ ನ ಸೆಕ್ಟರ್ 10ರಲ್ಲಿರುವ ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿ ಜನಪ್ರಿಯ ಪ್ರವಾಸಿ ತಾಣ. ಇದನ್ನು ನಿರ್ಮಿಸಿದ ಶ್ರೇಯಸ್ಸು ಲಿ ಕೊರ್ಬಸೈಯರ್ ಅವರಿಗೆ ಸಲ್ಲುತ್ತದೆ. ಈ ಅತ್ಯಾಕರ್ಷಕ ಕಟ್ಟಡದಲ್ಲಿ ದೊಡ್ಡದಾದ ಭೇಟಿ ಕೊಠಡಿ, ಒಂದು ಸಂರಕ್ಷಣಾ ಪ್ರಯೋಗಾಲಯ, ಲಾಬಿ, ಮೀಸಲು ಸಂಗ್ರಹ ಶೇಖರಣೆ, ತಾತ್ಕಾಲಿಕ ಪ್ರದರ್ಶನ ಹಾಲ್, ಒಂದು ಸಭಾಂಗಣ ಮತ್ತು ಒಂದು ಕೆಫೆಟೇರಿಯಾವಿದೆ. ಮ್ಯೂಸಿಯಂನ ವಿವಿಧ ಆರ್ಟ್ ಗ್ಯಾಲರಿಯಲ್ಲಿ ಗಾಂಧಾರ ಶಿಲ್ಪ ಕಲಾಕೃತಿ, ಇತಿಹಾಸ ಪೂರ್ವ ಪಳೆಯುಳಿಕೆ ಮತ್ತು ಇತರ ಹಲವಾರು ಕರಕುಶಲ ವಸ್ತುಗಳಿವೆ.
ವಸ್ತುಸಂಗ್ರಹಾಲಯದ ಒಳಗಡೆ ಉಲ್ಲೇಖ ಗ್ರಂಥಾಲಯವಿದ್ದು, ಇದರಲ್ಲಿ ಸಂಸ್ಕೃತಿ ಮತ್ತು ಕಲೆಗೆ ಸಂಬಂಧಪಟ್ಟ ಸುಮಾರು 6000 ಪುಸ್ತಕಗಳ ಸಂಗ್ರಹವಿದೆ. ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯಲ್ಲಿನ ಪ್ರಾಚೀನ ಹಾಗೂ ಆಧುನಿಕ ಕಲಾ ಪ್ರದರ್ಶನ ರಾಷ್ಟ್ರ ಹಾಗೂ ವಿದೇಶದ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.