ಚಾಂದೇರಿಯ ಪ್ರಖ್ಯಾತ ರಚನೆಗಳಾದ ಬಲಕಿಲಾ ಮತ್ತು ಖುನಿ ದರ್ವಾಜಾದ ಮಧ್ಯದಲ್ಲಿ ಈ ಸ್ಥಳವಿದೆ. 15 ನೇ ಶತಮಾನದಲ್ಲಿ ಈ ಹಾತ್ ಸಲ್ ಅನ್ನು ಕಟ್ಟಲಾಯಿತು. ಇದು ಚಾಂದೇರಿಯ ಹೆಸರಾಂತ ಮಾರುಕಟ್ಟೆಯ ಕುರುಹು ಎನ್ನಬಹುದು. ಪಾದಾಚಾರಿಗಳಿಗೆ ಮತ್ತು ಆನೆ ಸವಾರರಿಗೆ ಸುಲಭವಾಗುವ ರೀತಿಯಲ್ಲಿ ಈ ಮಾರುಕಟ್ಟೆಯನ್ನು ಕಟ್ಟಿದ್ದು ಇದರ ವಿಶೇಷತೆಯಾಗಿತ್ತು. ಇಲ್ಲಿನ ಅಂಗಡಿಗಳನ್ನು ಆರು ಹಂತದ ಯೋಜನೆ ಮೇಲೆ ನಿರ್ಮಿಸಲಾಯಿತು ಆದ್ದರಿಂದ ಇದು ಎತ್ತರದಲ್ಲಿ ಇತ್ತು. ಆದ್ದರಿಂದ ಜನ ಆನೆಯ ಮೇಲೆ ಕುಳಿತೇ ಬೇಕಾದುದನ್ನು ಕೊಂಡುಕೊಳ್ಳುತ್ತಿದ್ದರು. ಖಂಬಗಳ ಮೇಲೆ ಇದನ್ನು ಕಟ್ಟಲಾಗಿದ್ದು ಹಾತ್ ಸಲ್ ಎಂಬ ಹೆಸರು ಬಂದಿದೆ. ಆ ಅವಧಿಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಕಮಲದ ವಿನ್ಯಾಸ ಮತ್ತು ಜೈಲು ವಿನ್ಯಾಸದ ಪ್ರಭಾವಶಾಲಿ ವಾಸ್ತುಶಿಲ್ಪವನ್ನು ಇದು ಹೊಂದಿದೆ. ಸಾಟಿ ಇಲ್ಲದ ಈ ಹಾತ್ ಸಾಲ್ ಈಗಲೂ ಕೂಡ ಜನರನ್ನು ಆಕರ್ಷಿಸುತ್ತದೆ.


Click it and Unblock the Notifications