ಚಂಪಾವತ್ ನಿಂದ 14 ಕಿ.ಮೀ ದೂರದಲ್ಲಿರುವ ಲೋಹಾಘಾಟ್ ಇತಿಹಾಸ ಪ್ರಸಿದ್ಧವಾದ ಸ್ಥಳವಾಗಿದೆ. ಇದು ಲೋಹಾವತಿ ನದಿಯ ದಂಡೆಯ ಮೇಲೆ ಇದೆ. ಪಿ.ಬಾರನ್ ಇಲ್ಲಿನ ಸೌಂದರ್ಯಕ್ಕೆ ಮನಸೋತು ಕಾಶ್ಮೀರದ ನಂತರದ ಸ್ವರ್ಗ ಎಂದು ಕರೆದಿದ್ದಾರೆ. ಉತ್ತರಾಖಂಡದ ಚಂಪಾವತ್ ನ ಒಂದು ನಗರ ಪಂಚಾಯತ್ ಇದಾಗಿದೆ. ಇಲ್ಲಿನ ಹಲವು ಹಳೆಯ ದೇವಾಲಯಗಳು ನೋಡಲರ್ಹವಾಗಿವೆ. ಪ್ರವಾಸಿಗರು ಇಲ್ಲಿರುವ ಹಲವು ಹಳೆಯ ಕಾಲದ ದೇವಾಲಯಗಳನ್ನು ಭೇಟಿ ಮಾಡಬಹುದಾಗಿದೆ. ಹೋಲಿ ಮತ್ತು ಜನ್ಮಾಷ್ಟಮಿ ದೇಶದಾದ್ಯಂತದ ಜನರನ್ನು ಇಲ್ಲಿಗೆ ಆಕರ್ಷಿಸುತ್ತದೆ. ಇಲ್ಲೇ ಸಮಿಪವಿರುವ ಖಡಿ ಬಜಾರ್ ಗೂ ಪ್ರವಾಸಿಗರು ಭೇಟಿ ನೀಡಬಹುದು.


Click it and Unblock the Notifications