Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಷ್ಣುಪುರ್ » ಆಕರ್ಷಣೆಗಳು » ಲೋಕ್ತಾಕ್ ಸರೋವರ

ಲೋಕ್ತಾಕ್ ಸರೋವರ, ಬಿಷ್ಣುಪುರ್

2

ಇಲ್ಲಿನ ಇನ್ನೊಂದು ವಿಶೇಷ ’ಲೋಕ್ತಾಕ್ ಸರೋವರ’. ಉತ್ತರ ಭಾರತದಲ್ಲಿರುವ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ ಎನ್ನುವ ಹಿರಿಮೆ, ಪ್ರಖ್ಯಾತಿ ಈ ’ಲೋಕ್ತಾಕ್ ಸರೋವರ’ಕ್ಕೆ ಸಲ್ಲುತ್ತದೆ. ಮಣಿಪುರದ ರಾಜಧಾನಿಯಾದ ಇಂಫಾಲ್‌ನಿಂದ ಕೇವಲ 48 ಕಿ. ಮೀ ದೂರ ಇರುವ ಲೋಕ್ತಾಕ್ ಸರೋವರಕ್ಕೆ ಬಸ್ಸು, ಕಾರುಗಳ ಮೂಲಕ ಸುಲಭವಾಗಿ ತೆರಳಬಹುದು. ಈ ಸರೋವರದ ಇನ್ನೊಂದು ವಿಶೇಷತೆಯೆಂದರೆ ಪ್ರಪಂಚದಲ್ಲಿರುವ ಏಕೈಕ ’ತೇಲುವ ಸರೋವರ’ ಎನ್ನುವ ಪ್ರಖ್ಯಾತಿ ಹೊಂದಿರುವುದು. ’ಫ್ಯುಮಿಡ್’ಗಳೆಂದು ಕರೆಯಲ್ಪಡುವ ಹಲವು ದ್ವೀಪ ಮಾದರಿಯ ರಚನೆಗಳು ಈ ಸರೋವರದಲ್ಲಿ ತೇಲುತ್ತಾ ಇರುತ್ತವೆ. ಇವುಗಳು ಸುತ್ತಮುತ್ತಲಿನ ಮೀನುಗಾರರಿಗೆ ತಂಗುದಾಣ ಕೂಡಾ ಹೌದು. ಕೆಲವು ನೈಸರ್ಗಿಕವಾಗಿ ರಚನೆಯಾಗಿದ್ದರೆ ಇನ್ನು ಕೆಲವು ದ್ವೀಪಗಳನ್ನು ಮೀನುಗಾರಿಕೆಯ ದೃಷ್ಟಿಯಿಂದ ಕೃತಕವಾಗಿ ರಚಿಸಲಾಗಿದೆ.

ಇನ್ನು ಇಲ್ಲಿನ ಸರೋವರಗಳನ್ನು ಗಮನಿಸಿದರೆ, ಸರೋವರಗಳ ನೀರಿನ ಬಣ್ಣ ಸದಾ ಹಸಿರಾಗಿ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಸರೋವರದಲ್ಲಿ ಬೆಳೆಯುತ್ತಿರುವಂತಹ ಜೌಗು/ಪಾಚಿ ಸಸ್ಯಗಳು. ನೀರಿನಲ್ಲಿ ಮುಳುಗಡೆಯಾಗಿರುವ ಸಸ್ಯವರ್ಗವೇ ಇದಕ್ಕೆ ಕಾರಣ. ಈ ತೇಲುವ ಸಸ್ಯಗಳಿಂದಾಗಿ ಹಲವಾರು ಬಾರಿ ಈ ಭಾಗದ ಜನರು ತೊಂದರೆ ಅನುಭವಿಸಿದಂತಹ ಉದಾಹರಣೆಗಳಿವೆ.

ಲೋಕ್ತಾಕ್ ಸರೋವರಕ್ಕೆ ಭೇಟಿ ಕೊಟ್ಟರೆ ಸಾಕು, ಅಲ್ಲಿ ನೂರಾರು ಪ್ರವಾಸಿ ದ್ವೀಪಗಳು, ತಾಣಗಳು ನಮ್ಮನ್ನು ಕೈಬೀಸಿ ತಮ್ಮತ್ತ ಕರೆಯುತ್ತವೆ. ಲೋಕ್ತಾಕ್ ಸರೋವರಕ್ಕೆ ಭೇಟಿ ಕೊಟ್ಟೆವೆಂದರೆ ಈ ಸರೋವರದಲ್ಲಿರುವ ಸೆಂಡ್ರಾ ದ್ವೀಪವನ್ನು ನೋಡಲೇಬೇಕು. ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರಿಗಾಗಿ ಉತ್ತಮ ಸೌಕರ್ಯಗಳನ್ನು ಹೊಂದಿದೆ. ಬೋಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಇಲ್ಲಿ ಪ್ರವಾಸಿಗರಿಗೆ ಉತ್ತಮ ಮನರಂಜನೆ ಒದಗಿಸುತ್ತವೆ. ಸೆಂಡ್ರಾ ತಾಣದಲ್ಲಿರುವ ಕೆಫಿಟೇರಿಯಾ ಇಲ್ಲಿನ ಮುಖ್ಯ ಆಕರ್ಷಣೆ. ಇಲ್ಲಿ ನಿಂತು ನೋಡಿದರೆ ತೇಲುವ ಜೌಗು ಸಸ್ಯಗಳು, ಶುದ್ಧ ತಿಳಿನೀರಿನ ನೀಲ ಸರೋವರ, ಬೋಟ್‌ಗಳ ಓಡಾಟ ಇವುಗಳನ್ನೆಲ್ಲಾ ಮನದಣಿಯ ನೋಡಬಹುದು. ಭವ್ಯವಾದ ಲೋಕ್ತಾಕ್ ಸರೋವರದ ಸುಂದರ ಪಕ್ಷಿನೋಟವನ್ನು ಈ ಸೆಂಡ್ರಾ ದ್ವೀಪ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಇದು ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆ ನೂರಾರು ಪ್ರಾಣಿ ಪಕ್ಷಿಗಳ ಆಶ್ರಯತಾಣ ಕೂಡಾ ಆಗಿದೆ. ಇಲ್ಲಿ ಆಶ್ರಯ ಪಡೆದಿರುವಂತಹ ನೂರಾರು ಪಕ್ಷಿಗಳನ್ನು ನಾವು ಈ ಪುಟ್ಟ ದ್ವೀಪದಲ್ಲಿ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun