Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಷ್ಣುಪುರ್ » ಆಕರ್ಷಣೆಗಳು » ಕೈಬುಲ್ ಲಾಮ್ಜಾವೋ ರಾಷ್ತ್ರೀಯ ಉದ್ಯಾನವನ

ಕೈಬುಲ್ ಲಾಮ್ಜಾವೋ ರಾಷ್ತ್ರೀಯ ಉದ್ಯಾನವನ, ಬಿಷ್ಣುಪುರ್

7

ಬಿಷ್ಣುಪುರದ ಪ್ರವಾಸಿ ತಾಣಗಳಲ್ಲಿ ನಮಗೆ ಅಗ್ರಪಟ್ಟಿಯಲ್ಲಿ ಕಾಣಸಿಗುವುದೆಂದರೆ ’ಕೈಬುಲ್ ಲಾಮ್ಜಾವೋ’ ರಾಷ್ತ್ರೀಯ ಉದ್ಯಾನವನ. ವಿಶ್ವದ ಅತ್ಯಂತ ದೊಡ್ಡ ತೇಲುವ ಉದ್ಯಾನವನವೆಂದೇ ಪ್ರಖ್ಯಾತಿ ಪಡೆದಿರುವ ಈ ಉದ್ಯಾನವನವು ಸರೋವರದ ದಕ್ಷಿಣ ಪಾತ್ರದಲ್ಲಿದೆ. ಇದು ತೇಲಲು ಕಾರಣ ಇಲ್ಲಿರುವ ಏಕರೂಪದ ಪರಿಸರ ವ್ಯವಸ್ಥೆ. ’ಫುಮ್ಡಿ’ಗಳೆಂದು ಕರೆಯಲ್ಪಡುವ ತೇಲುವ ಜೌಗು ಸಸ್ಯಗಳೇ ಇದಕ್ಕೆ ಕಾರಣ. ಲೋಕ್ತಾಕ್ ಸರೋವರದ ಅವಿಭಾಜ್ಯ ಅಂಗವಾಗಿರುವ ’ಕೈಬುಲ್ ಲಾಮ್ಜಾವೋ’ ಉದ್ಯಾನವನವು ಬಿಷ್ಣುಪುರದ ಹತ್ತಿರದಲ್ಲಿರುವ ’ತಂಗಾ’ ಎನ್ನುವ ಪಟ್ಟಣದಲ್ಲಿದೆ.

ಈ ಮೊದಲೇ ಹೇಳಿದಂತೆ ಬಿಷ್ಣುಪುರವು ಅಪರೂಪದ ಸಾಂಗಾಯ್ ಜಿಂಕೆಗಳ ಆಶ್ರಯತಾಣ. ಇಲ್ಲಿ ಈ ವಿಶಿಷ್ಟ ಜಿಂಕೆಗಳ ರಕ್ಷಣೆಗೆಂದು ಸ್ಥಾಪಿಸಲಾದ ಅಭಯಾರಣ್ಯಗಳಲ್ಲಿ ಒಂದಾದ ’ಕೈಬುಲ್ ಲಾಮ್ಜಾವೋ’ ಅಭಯಾರಣ್ಯವನ್ನು 1977ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಣೆ ಮಾಡಲಾಯಿತು. ಈ ನ್ಯಾಚುರಲ್ ಪಾರ್ಕ್ ಕೇವಲ ಸಾಂಗಾಯ್ ಜಿಂಕೆಗಳಿಗೆ ಮಾತ್ರವಲ್ಲ, ಇತರ ಪ್ರಾಣಿಗಳಿಗೂ ಆಶ್ರಯ ಒದಗಿಸುತ್ತಿದೆ. ಹಾಗ್ ಡೀರ್, ವಾಟರ್ ಫೌಲ್ ಮುಂತಾದ ಪ್ರಾಣಿಸಂಕುಲಗಳು ಈ ಉದ್ಯಾನವವನದಲ್ಲಿ ಬೆಚ್ಚಗೆ ಆಶ್ರಯ ಪಡೆದಿವೆ. ಅಂದಹಾಗೆ ಈ ರಕ್ಷಿತಾರಣ್ಯವು ಲೋಕ್ತಾಕ್ ಸರೋವರದಿಂದ ಸುತ್ತುವರೆದಿದ್ದು, ಜೀವಸಂಕುಲಗಳಿಗೆ ಉತ್ತಮ ತಂಪು ವಾತಾವರಣದ ಜೊತೆಗೆ ಪ್ರವಾಸಿಗರಿಗೆ ನೋಡಲು ಉತ್ತಮ ಪ್ರವಾಸಿತಾಣವನ್ನೇ ಸೃಷ್ಠಿಸಿದೆ. ಇಂಫಾಲ್‌ನಿಂದ ಕೇವಲ 53 ಕಿ.ಮೀ ದೂರದಲ್ಲಿರುವ ಈ ತಾಣಕ್ಕೆ ಪ್ರವಾಸಿಗರು ಸುಲಭವಾಗಿ ತೆರಳಬಹುದು. ಇನ್ನು ಒಕ್ಟೋಬರ್ ಮತ್ತು ಫೆಬ್ರವರಿ ತಿಂಗಳ ಮಧ್ಯೆ ಇಲ್ಲಿಗೆ ಭೇಟಿ ಕೊಟ್ಟರೆ ಪ್ರವಾಸ ಇನ್ನಷ್ಟು ಮಜವಾಗಿರುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri