ಎಬುದೌ ತಾಂಗ್ಜಿಂಗ್ ದೇವಾಲಯವು ಬಿಷ್ಣುಪುರದ ಪ್ರಸಿದ್ಧ ನಗರವಾದ ಮೊರಾಂಗ್ನಲ್ಲಿದೆ. ಬಹಳ ಪುರಾತನವಾದ ದೇವಾಲಯ ಇದಾಗಿದ್ದು, ಮಣಿಪುರಿಗಳ ಪುರಾತನ ಹಿಂದೂ ದೇವತೆ ಎಬುದೌ ತಾಂಗ್ಜಿಂಗ್ ಇಲ್ಲಿನ ಆರಾದ್ಯಮೂರ್ತಿ. ಈ ದೇವಾಲಯವು ಮೊರಾಂಗ್ ಅನ್ನು ಕೆಟ್ಟ ಶಕ್ತಿಗಳಿಂದ ಕಾಪಾಡುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಪ್ರತಿವರ್ಷ ಮೇಯಲ್ಲಿ ಆಚರಿಸಲ್ಪಡುವ ಮಣಿಪುರಿ ಹಬ್ಬ ಲಾಯ್ ಹರೋಬಾದ ಸಂದರ್ಭದಲ್ಲಿ ಈ ದೇವಾಲಯವನ್ನು ನೋಡುವುದೇ ಒಂದು ವೈಭವ. ಈ ಸಂದರ್ಭದಲ್ಲಿ ದೀಪಗಳ ಬೆಳಕಿನಲ್ಲಿ ಬೆಳಗುತ್ತಿರುವಂತಹ ಈ ದೇವಾಲಯವನ್ನು ನೋಡುವುದೇ ಒಂದು ವೈಭವ.
ತಮ್ಮನ್ನು ಕಾಪಾಡಿಕೊಂಡುಕೊಂಡು ಬರುತ್ತಿರುವ ಎಬುದೌ ತಾಂಗ್ಜಿಂಗ್ ದೇವರಿಗೆ ಇಲ್ಲಿನ ಜನರು, ಹಾಡು, ನೃತ್ಯಗಳ ಮೂಲಕ ಧನ್ಯವಾದ ಸಲ್ಲಿಸುವ, ಗೌರವಿಸುವ ಹಬ್ಬವೆಂದು ಕೂಡಾ ಇದು ಕರೆಯಲ್ಪಡುತ್ತದೆ. ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಎಲ್ಲಾ ಜನರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ದೇವಾಲಯಕ್ಕೆ ಬಂದು ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತಾರೆ. ’ಕಂಬಾ ತೊಯ್ಬಿ’ ಎನ್ನುವ ನೃತ್ಯವನ್ನು ಕೂಡಾ ಈ ಹಬ್ಬದ ಸಂದರ್ಭದಲ್ಲಿ ನಾವು ಕಾಣಬಹುದಾಗಿದೆ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಇಲ್ಲಿ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.