ಭೋಪಾಲ್ ನಲ್ಲಿರುವ ಅಪ್ಪರ್ ಸರೋವರ, ದೇಶದ ಅತ್ಯಂತ ಹಳೆಯ ಮಾನವ ನಿರ್ಮಿತ ಸರೋವರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸರೋವರ 11 ಶತಮಾನದ್ದಾಗಿದೆ ಮತ್ತು ಇದನ್ನು ಸ್ಥಳೀಯವಾಗಿ ಬಡಾ ತಲಾಬ್ ಎಂದು ಕರೆಯಲಾಗುತ್ತದೆ. ಈ ಸರೋವರ ಕೋಲನ್ಸ್ ನದಿಯ ಮೇಲೆ ಒಂದು ಬೃಹತ್ ಗಾತ್ರದಲ್ಲಿ ಕಂಡುಬರುತ್ತದೆ ಮತ್ತು ಭಾರತದ ಅತ್ಯಂತ ಸುಂದರ ಸರೋವರ ಎಂದು ಕರೆಯಲ್ಪಟ್ಟಿದೆ.
ಸ್ಥಳೀಯ ದಂತಕಥೆಯ ಪ್ರಕಾರ, ಸರೋವರವನ್ನು ರಾಜ ಭೋಜನ ಆದೇಶದ ಮೇರೆಗೆ ರಚಿಸಲಾಗಿತ್ತು ಮತ್ತು ಸರೋವರದ ನೀರಿನಿಂದ ರಾಜನ ಚರ್ಮ ರೋಗಕ್ಕೆ ಚಿಕಿತ್ಸೆ ನೀಡಲಾಗಿತ್ತು ಎಂದು ನಂಬಲಾಗಿದೆ. ಈ ಸರೋವರವನ್ನು ವ್ಯಾಪಕ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಒಂದು ದೊಡ್ಡ ಅಚ್ಚುಕಟ್ಟು ಪ್ರದೇಶವನ್ನಾಗಿ ನಿರ್ಮಿಸಲಾಗಿದೆ. ಭೋಪಾಲ್ ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶಕ್ಕಾಗಿ ಅಪ್ಪರ್ ಸರೋವರದ ನೀರನ್ನು ಬಳಸಲಾಗತ್ತದೆ. ಪ್ರವಾಸಿಗರ ಆಕರ್ಷಣೆಗಾಗಿ ಸರೋವರದ ಸುತ್ತಲೂ ಸುಂದರವಾದ ತೋಟ, ಕಮಲಾ ಪಾರ್ಕ್ ನಿರ್ಮಿಸಿ ಸರೋವರದ ಸೌಂದರ್ಯವನ್ನು ಹೆಚ್ಚಿಸಲಾಗಿದೆ.