Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಚೌಕ್ ಬಜಾರ್

ಚೌಕ್ ಬಜಾರ್, ಭೋಪಾಲ್

1

ಭೋಪಾಲ್ ರಲ್ಲಿ ಚೌಕ್ ಬಜಾರ್ ವಿಶೇಷವಾಗಿ ಎಲ್ಲಾ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳ ಅದರಲ್ಲೂ ಪತ್ನಿ ಅಥವಾ ಗೆಳತಿಯ ಜೊತೆಯಲ್ಲಿ ಬರಲು ಈ ಸ್ಥಳ ಅತ್ಯಂತ ಸೂಕ್ತವಾದುದು. ಈ ಮಾರುಕಟ್ಟೆ ಭೋಪಾಲ್ ಹಳೆಯ ನಗರದಲ್ಲಿ ನೆಲೆಗೊಂಡಿದೆ ಮತ್ತು ಕೆಲವು ವಸ್ತುಗಳನ್ನು ಅಗ್ಗವಾಗಿ ಪಡೆಯಲು ಒಂದು ಅದ್ಭುತ ಸ್ಥಳವಾಗಿದೆ. ಈ ಸ್ಥಳದಲ್ಲಿ ಕೆಲವು ಪ್ರಾಚೀನ ಮಸೀದಿಗಳು ಮತ್ತು ಆ ಕಾಲದಲ್ಲಿದ್ದ ನೃತ್ಯಗಾರ್ತಿಯರನ್ನೊಳಗೊಂಡ ಪುರಾತನ ಹವೇಲಿಗಳನ್ನು ಕಾಣಬಹುದು.

ಚೌಕ್ ನಲ್ಲಿ ಸುಲಭವಾಗಿ ತಿರುಗು ವ್ಯಾಪಾರಿಗಳಿಂದ  ಚತುರತೆಯ ಚೌಕಾಸಿಯ ನಂತರ ಅತ್ಯಂತ ಕಡಿಮೆ ಬೆಲೆಗೆ ಕಸೂತಿ ವೆಲ್ವೆಟ್ ಹಾಗು ಮೆತ್ತನೆಯ ಬಟ್ಟೆಗಳನ್ನು ಖರೀದಿಸಬಹುದು. ಅಲ್ಲದೆ ನೀವು ಕೆಲವು ಮನೋಹರ ಕಸೂತಿ ರೇಷ್ಮೆ ಮತ್ತು ಸೂಕ್ಷ್ಮವಾಗಿ ಕೆತ್ತಲಾದ ಬೆಳ್ಳಿ ಆಭರಣಗಳನ್ನೂ ಕೊಂಡುಕೊಳ್ಳಬಹದು. ಮಹಿಳೆಯರು ಬಹುಶಃ ಸುಂದರ ವೆಲ್ವೆಟ್  ಪರ್ಸ್ ಗಳು, ಭೋಪಾಲ್ ಕರಕುಶಲ ಸೀರೆಗಳು ಸೇರಿದಂತೆ ಕಸೂತಿ ಉಡುಗೆ, ತೋಳ್ಬಂದಿ ಮುಂತಾದ ಸಾಂಪ್ರದಾಯಿಕ ಮತ್ತು ವರ್ಣಮಯ ರತ್ನಾಭರಣಗಳನ್ನು ಕೊಂಡುಕೊಳ್ಳುವುದರಲ್ಲೇ ದಿನವೆಲ್ಲ ಕಳೆಯಬಹುದು!

ಒಮ್ಮೆ ಈ ಮಾರಕಟ್ಟೆಗೆ ಬಂದರೆ ನಿಮ್ಮೊಂದಿಗೆ ಎಷ್ಟೇ ಹಣವಿದ್ದರೂ ಹೋಗುವಾಗ ಎಲ್ಲವನ್ನೂ ಖಾಲಿ ಮಾಡಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ!  ಆದರೆ, ಸಾಧ್ಯವಾದಷ್ಟು ಚೌಕಾಸಿ ಮಾಡಲು  ಮಾತ್ರ ಮರೆಯಬೇಡಿ, ಇಲ್ಲವಾದಲ್ಲಿ ಕೊನೆಯಲ್ಲಿ ಮೋಸ ಹೋಗಿದ್ದೀರಿ ಎಂದು ವಿಷಾದ ಪಡಬೇಕಾಗಬಹುದು!

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed