ಮಧ್ಯ ಪ್ರದೇಶದ ಬಗ್ಗೆ ಜಗತ್ತಿಗೆ ತಿಳಿಸಬೇಕು ಎಂಬ ಉದ್ದೇಶದೊಂದಿಗೆ ಕಟ್ಟಲಾದ ಬಿರ್ಲಾ ವಸ್ತು ಸಂಗ್ರಹಾಲಯ ಆ ಉದ್ದೇಶವನ್ನು ಪೂರ್ತಿಗೊಳಿಸುವುದರೊಂದಿಗೆ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೂ ಆಗಿದೆ. ಇಲ್ಲಿರುವ ವಸ್ತುಗಳು ಮತ್ತು ಕರಕುಶಲ ವಸ್ತುಗಳು ಮಧ್ಯಪ್ರದೇಶ ಇತಿಹಾಸದ ಬಗ್ಗೆ ನಿಮ್ಮಲ್ಲಿ ಇನ್ನಷ್ಟು ವಿಸ್ತಾರವಾದ ತಿಳುವಳಿಕೆ ಮೂಡಿಸುತ್ತದೆ. ಇಲ್ಲಿ ಹಲವು ವಸ್ತುಗಳು ಮಧ್ಯಪ್ರದೇಶದ ಅತಿ ಪುರಾತನ ಇತಿಹಾಸದಿಂದ ಮೊದಲುಗೊಂಡು ಇತ್ತೀಚೆಗಿನ ಸಮಯದ ವರೆಗೆ ಎಲ್ಲಾ ವಸ್ತುಗಳಿವೆ.
ಇಲ್ಲಿ ಹಲವು ಉಪಕರಣಗಳು ಶಿಲಾಯುಗ ಮತ್ತು ಅದಕ್ಕಿಂತಲೂ ಹಳೆಯ ಕಾಲದವಾಗಿವೆ. ಇಲ್ಲಿ ಏಳು ಮತ್ತು ಹದಿಮೂರನೆಯ ಶತಮಾನದ ನಡುವಿನ ಹಲವು ಕಲ್ಲಿನಿಂದ ಮಾಡಿದ ಕೆತ್ತನೆಗಳೂ ಇವೆ. ನಾಣ್ಯ ಮತ್ತು ಹಸ್ತಪ್ರತಿಗಳೂ ಇಲ್ಲಿವೆ. ಇವು ಸುಮಾರು ಕ್ರಿ.ಪೂ ಎರಡನೆಯ ಶತಮಾನದವಾಗಿವೆ. ಇಲಿ ಭಿಂಬೆಟ್ಕಾ ರಾಕ್ ಶೆಲ್ಟರ್ ಇದೆ ಇದು ಇಲ್ಲಿ ಬರುವ ಎಲ್ಲಾ ಪ್ರವಾಸಿಗಳ ಪ್ರಮುಖ ಆಕರ್ಷಣೆ.


Click it and Unblock the Notifications