Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮತಲ್ » ಆಕರ್ಷಣೆಗಳು » ಭೀಮತಲ ಕೆರೆ

ಭೀಮತಲ ಕೆರೆ, ಭೀಮತಲ್

2

ಸಮುದ್ರ ಮಟ್ಟದಿಂದ ಈ ಕೆರೆ 4500 ಅಡಿ ಎತ್ತರದಲ್ಲಿದೆ. ನೈನಿತಾಲ್‌ ಸುತ್ತಲಿನ ಪ್ರದೇಶದಲ್ಲಿ ಅತ್ಯಂತ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದರದ್ದು. ಈ ಕೆರೆಗೆ ಹೆಸರು ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮನಿಂದಾಗಿ ಬಂದಿದ್ದಾಗಿದೆ. ನೈನಿತಾಲ್‌ನಿಂದ ಈ ಕೆರೆ ಇರುವುದು 22 ಕಿ.ಮೀ. ದೂರದಲ್ಲಿ. ಇಲ್ಲಿ ಪೆಡಲಿಂಗ್‌ ಹಾಗೂ ಬೋಟಿಂಗ್‌ ಸೌಲಭ್ಯ ಇದ್ದು, ಈ ಆಕರ್ಷಕ ಕೆರೆಯು ವಿಪರೀತವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ಅಂಶ ಪಕ್ಷಿಗಳು. ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗಿ ಹಲವು ವಿಧದ ಪಕ್ಷಿಗಳು ಆಗಮಿಸುತ್ತವೆ. ಹಿಮಾಲಯ ಪರ್ವತದಿಂದ ಕಪ್ಪು ಗಿಡುಗ, ವಾಲ್‌ ಕ್ರೀಪರ್‌ ಪಕ್ಷಿಗಳು, ತ್ವಾನಿ ಫಿಸ್‌ ಓವಲ್ಸ್‌, ಬುಲ್‌ಬುಲ್‌ ಹಾಗೂ ಎಮರಾಲ್ಡ್‌ ಡೌ ಪಕ್ಷಿಗಳು ಗಮನ ಸೆಳೆಯುತ್ತವೆ.

ಕೆರೆಯ ನಟ್ಟ ನಡುವೆ ಅತಿ ದೊಡ್ಡ ದ್ವೀಪವೊಂದಿದೆ. ಕೆರೆಯ ತೀರದಿಂದ ಇದು 91 ಮೀಟರ್‌ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಗೆ ಬೋಟ್‌ ಮೂಲಕ ತಲುಪಬಹುದು. ಇಲ್ಲಿ ಅತ್ಯಾಕರ್ಷಕ ಅಕ್ವೇರಿಯಂ ವೀಕ್ಷಿಸಬಹುದಾಗಿದೆ. ಇಲ್ಲಿನ ಅಕ್ವೇರಿಯಂನಲ್ಲಿ ಅತ್ಯಂತ ಅಪರೂಪದ ಮೀನುಗಳ ಸಂಗ್ರಹವಿದೆ. ಚೈನಾ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಮತ್ತಿತರ ಭಾಗದ ಮೀನುಗಳು ಗಮನ ಸೆಳೆಯುತ್ತವೆ. ಕುಮಾವೋನಿ ಬೆಟ್ಟ ಇಲ್ಲಿದ್ದು ಇದು ಅತ್ಯಾಕರ್ಷಕ ನೋಟವನ್ನು ಸೃಷ್ಟಿಸಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed