Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮತಲ್ » ಹವಾಮಾನ

ಭೀಮತಲ್ ಹವಾಮಾನ

ಪ್ರವಾಸಿಗರು ಭೀಮತಲಕ್ಕೆ ಭೇಟಿ ನೀಡುವುದಾದರೆ ಬೇಸಿಗೆ ಉತ್ತಮ ಎಂಬ ಸಲಹೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ವಾತಾವರಣವೂ ಆಹ್ಲಾದಮಯವಾಗಿರುತ್ತದೆ. ಟ್ರೆಕ್ಕಿಂಗ್‌, ಹೈಕಿಂಗ್‌, ಸ್ಥಳ ವೀಕ್ಷಣೆಗೆ ಇದು ಉತ್ತಮವಾಗಿರುತ್ತದೆ. ಚಳಿಗಾಲದ ಪೂರ್ವ ಸಮಯವೂ ಪ್ರವಾಸಕ್ಕೆ ಯೋಗ್ಯವಾಗಿರುತ್ತದೆ. 

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಭೀಮತಲದಲ್ಲಿ ಬೇಸಿಗೆಯು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮೇ ವರೆಗೂ ಮುಂದುವರಿಯುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶ 27 ಡಿಗ್ರಿ ಸೆಲ್ಶಿಯಸ್‌ ಇದ್ದರೆ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ಪ್ರವಾಸಿಗರು ಈ ಸಂದರ್ಭದಲ್ಲಿ ಬರುವಾಗ ಹಗುರಾದ ಉಲ್ಲನ್‌ ಹಾಗೂ ಹತ್ತಿಯ ಬಟ್ಟೆ ಜತೆಗೆ ತರಲು ಸೂಚಿಸಲಾಗುತ್ತದೆ. ಇದು ಈ ಪ್ರದೇಶಕ್ಕೆ ಭೇಟಿ ನೀಡಲು ಸಕಾಲ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಮಳೆಗಾಲವು ಜುಲೈ ತಿಂಗಳಲ್ಲಿ ಆರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಈ ಭಾಗದಲ್ಲಿ ಹಚ್ಚ ಹಸಿರು ವಾತಾವರಣವನ್ನು ಈ ಸಂದರ್ಭದಲ್ಲಿ ಕಾಣಬಹುದು. ಮಳೆಗಾದಲ್ಲಿ ಇಲ್ಲಿ ವಿಪರೀತ ವರ್ಷಧಾರೆಯಾಗುತ್ತದೆ. ಇದರಿಂದ ಈ ಕಾಲದಲ್ಲಿ ಬರುವುದು ಕೊಂಚ ಕಷ್ಟ.

ಚಳಿಗಾಲ

(ನವೆಂಬರ್‌ನಿಂದ ಫೆಬ್ರವರಿ): ನವೆಂಬರ್‌ನಲ್ಲಿ ಇಲ್ಲಿ ಚಳಿಗಾಲ ಆರಂಭವಾಗಿ ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ ಉಷ್ಣಾಂಶ -3 ಡ್ರಿಗ್ರಿ ಸೆಲ್ಶಿಯಸ್‌ ಇದ್ದರೆ ಗರಿಷ್ಠ 15 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ.