ಪೈದಾ, ಬಸ್ತಿ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಅಥವಾ ಗ್ರಾಮ. ಇದು ಸಿದ್ಧಾರ್ಥ್ ನಗರದ ಹಾದಿಯಲ್ಲಿ ಜಿಲ್ಲೆಯಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿದೆ. ದೇಶದ ಸ್ವಾತಂತ್ರ್ಯ ಚಳವಳಿಯಯಲ್ಲಿ ತನ್ನ ಕೊಡುಗೆಯನ್ನು ನೀಡಿರುವ ಕಾರಣದಿಂದಾಗಿ ಈ ಹಳ್ಳಿ ಅತ್ಯಂತ ಪ್ರಸಿದ್ಧವಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಕೇಂದ್ರವಾಗಿತ್ತು. ಪೈದಾ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಇರುವ ಸ್ಮಾರಕಗಳ ಒಂದು ನೆಲೆಯಾಗಿದೆ. ಜಿಲ್ಲೆಯ ಆಡಳಿತದ ತೋಟಗಾರಿಕಾ ಇಲಾಖೆಯು ಗ್ರಾಮದಲ್ಲಿ ಒಂದು ಸುಂದರ ಉದ್ಯಾನವನ ಸ್ಥಾಪಿಸಿದೆ. ಉದ್ಯಾನ ದೂರದ ಹಾಗೂ ಸಮೀಪದ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.


Click it and Unblock the Notifications