ದೊರೆ ಅವಂತಿವರ್ಮನ ಆಡಳಿತಾವಧಿಯಾದ ಕ್ರಿ.ಶ 880 ರಲ್ಲಿ ಸೋಪೋರ್ ನಗರವನ್ನು ಸ್ಥಾಪಿಸಲಾಯಿತು. ಝೀಲಮ್ ನದಿಯ ದಂಡೆಯ ಮೇಲಿರುವ ಈ ನಗರವು ಶ್ರೀನಗರದಿಂದ 48 ಕಿಲೋ ಮೀಟರ್ ದೂರದಲ್ಲಿದೆ. ಉತ್ತರ ಕಾಶ್ಮೀರದ ದೊಡ್ಡ ವ್ಯವಹಾರ ಕೇಂದ್ರವಾಗಿರುವ ಇದು 'ಏಷಿಯಾದ ಸೇಬಿನ ಪಟ್ಟಣ' ಎಂದೇ ಹೆಸರು ಪಡೆದುಕೊಂಡಿದೆ. ಇಡೀ ಪ್ರದೇಶದಲ್ಲಿ ಸೋಪೋರ್ ಸೇಬುಗಳು ಉತ್ತಮವಾಗಿರುತ್ತವೆ. ಜೊತೆಗೆ 'ಕಾಶ್ಮೀರದ ಲಂಡನ್' ಎಂಬ ಬಿರುದೂ ಕೂಡ ಈ ಪಟ್ಟಣಕ್ಕಿದೆ. ಪ್ರಸ್ತುತ ಹೈನು ಮತ್ತು ಕೃಷಿ ಉದ್ಯಮವು ಇಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿವೆ.
ಜಾಮಿಯಾ ಮಸೀದಿ, ಖಾನ್-ಖಾ ಶಾಹ್-ಇ-ಹಮ್ದನ್ ಗಳು ಇಲ್ಲಿರುವ ಪ್ರಸಿದ್ದ ಸಣ್ಣ ಮಂದಿರಗಳು. ಶೇಖ್ ಹಮ್ಜಾ ಮಕ್ದೂಮಿ, ಅರ್ಜಾ ಸಾಹಿಬ್ ತಾಕ್ಯಾ ಖಾನ್ ಜೈನಗೈರ್, ದಾಯಿದ್ ಮೌಜ್ ಮುಂಡ್ಜಿ, ಬಾಬಾ ಶುಕುರ್ ದಿನ್ ವತ್ಲಬ್ ಸೋಪೋರ್, ಹತಿ ಶಾಹ್ ಸಾಹಿಬ್ ಗಳು ಇಲ್ಲಿರುವ ಇನ್ನಿತರ ಧಾರ್ಮಿಕ ಶೃದ್ದಾ ಕೇಂದ್ರಗಳು. ಇವುಗಳಲ್ಲದೆ, ಕಾಳಿ ಮಂದಿರ, ಶಿವ ಮಂದಿರ, ರಿಷಿ ಪೀರ್ ಮಂದಿರ, ಬತ್ಪೊರ ಮತ್ತು ಬೈರವ್ ಮಂದಿರಗಳನ್ನು ಇಲ್ಲಿ ಕಾಣಬಹುದಾಗಿದೆ.


Click it and Unblock the Notifications