Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಬಾಂಧವಗಡದ ಪ್ರಾಚೀನ ಗುಹೆಗಳು

ಬಾಂಧವಗಡದ ಪ್ರಾಚೀನ ಗುಹೆಗಳು, ಬಾಂಧವಗಡ್

1

ಬಾಂಧವಗಡ್ ಬೆಟ್ಟದ ಮರಳುಕಲ್ಲು ದಿಣ್ಣೆಯ ಮೇಲೆ ಪ್ರಾಚೀನ ಗುಹೆಗಳು ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಸುಮಾರು 39 ಗುಹೆಗಳಿದ್ದು, ಸುಮಾರು 5 ಕಿ.ಮೀ. ತನಕ ವ್ಯಾಪಿಸಿದೆ. ಈ ಗುಹೆಗಳ ಒಳಗಡೆ ಬ್ರಾಹ್ಮಿ ಲಿಪಿ ಕೆತ್ತನೆಗಳಿವೆ ಮತ್ತು ಕೆಲವು ಗುಹೆಗಳಲ್ಲಿ ಹುಲಿ, ಹಂದಿ, ಆನೆ ಹಾಗೂ ಕುದುರೆಯಲ್ಲಿ ಕುಳಿತ ವ್ಯಕ್ತಿಗಳ ಚಿತ್ರಗಳಿವೆ. ಬಡಿ ಗುಫಾ ಎಂದರೆ ದೊಡ್ಡ ಗುಹೆ ಎಂದರ್ಥ. ಇದು ತುಂಬಾ ಹಳೆಯ ಗುಹೆಯಾಗಿದ್ದು, ಹತ್ತನೇ ಶತಮಾನದ್ದಾಗಿದೆ. ಇದರಲ್ಲಿ ಹಲವಾರು ಕಂಬಗಳೂ ಹಾಗೂ 9 ದೊಡ್ಡ ಕೋಣೆಗಳಿವೆ.

ಇದು ಹಳೆಯ ಸ್ವರೂಪದ ಗುಹೆಯಾಗಿದ್ದು, ಇದರಲ್ಲಿ ಯಾವುದೇ ಕೆತ್ತನೆ ಮತ್ತು ಶಿಲ್ಪಗಳು ಕಾಣಸಿಗುವುದಿಲ್ಲ. ಗುಹೆಗಳನ್ನು ಯಾಕೆ ನಿರ್ಮಿಸಲಾಗಿದೆ ಎನ್ನುವ ವಿವರ ಯಾರಿಗೂ ತಿಳಿದಿಲ್ಲ. ಇದು ಇಂದಿನವರೆಗೂ ನಿಗೂಢವಾಗಿಯೇ ಉಳಿದಿದೆ. ಈ ಗುಹೆಗಳನ್ನು ಸನ್ಯಾಸಿಗಳು ಧ್ಯಾನ ಮಾಡಲು ಉಪಯೋಗಿಸುತ್ತಿದ್ದಿರಬಹುದು ಮತ್ತು ಸೇನೆ ಇದನ್ನು ಶಸ್ತ್ರಾಸ್ತ್ರ ಸಂಗ್ರಹಿಸಿಡಲು ಬಳಸಿರಬಹುದೆಂದು ನಂಬಲಾಗುತ್ತಿದೆ. ಇಂದು ಬಾಂಧವಗಡ್ ರಾಷ್ಟ್ರೀಯ ಉದ್ಯಾನದಲ್ಲಿರುವ ಹುಲಿ, ಬಾವಲಿ ಮತ್ತು ಇತರ ಪ್ರಾಣಿಗಳಿಗೆ ಈ ಗುಹೆಗಳು ಆಶ್ರಯತಾಣವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City