Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಗಾ » ಆಕರ್ಷಣೆಗಳು » ಕೇಪ್ ಟಾವ್ನ್ ಕ್ಯಾಫೆ

ಕೇಪ್ ಟಾವ್ನ್ ಕ್ಯಾಫೆ, ಬಾಗಾ

1

ನೀವೇನಾದರು ಕಡಿಮೆ ದರದ ನೈಟ್ ಕ್ಲಬ್ ಗಳ ಹುಡುಕಾಟದಲ್ಲಿದ್ದಿರಾ? ಹಾಗಿದ್ದಲ್ಲಿ ಟಿಟೊ ಬೀದಿಯಲ್ಲಿರುವ ಕೇಪ್ ಟಾವ್ನ್ ಕ್ಯಾಫೆ ಭೇಟಿ ನೀಡಿರಿ. ಲೆಜೆಂಡರಿ ಟಿಟೊಸ್ ಕ್ಯಾಫೆ ಸಹಭಾಗಿತ್ವದಲ್ಲಿ ಐಬಿಸ್ ಅಥವಾ ಇಟ್ಯಾಪ್ ನಂತಹ ಬ್ರ್ಯಾಂಡ್ ಗಳನ್ನು ಇಲ್ಲಿ ಆಸ್ವಾದಿಸಬಹುದು. ಟಿಟೊ ಬೀದಿಯಲ್ಲಿ ಇರುವ ಇತರೆ ನೈಟ್ ಕ್ಲಬ್ ಗಳಿಗಿಂತಲೂ ಇದು ಮಿತವ್ಯಯವಾಗಿದ್ದು ಕಡಿಮೆ ದರದಲ್ಲಿ ರುಚಿಕರವಾದ ಗೋವನ್ ಮಾದರಿಯ ಊಟ ಲಭ್ಯ. ಮಧ್ಯ ವಯಸ್ಸಿನ ಯಾತ್ರಿಕರಿಗಂತೂ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇನ್ನು ಡಿಸೈನರ್ ಶಾಪಿಂಗ್ ಇಷ್ಟಪಡುವವರಿಗಾಗಿ 'ಕರ್ವ್ಸ್' ಎಂಬ 'ಬಾಟಿಕ್' ಕೂಡ ಇಲ್ಲಿದೆ.ಇಲ್ಲಿ ಈಜುಡುಗೆಗಳು, ಟಾಪ್ ಗಳು ಮತ್ತು ಇತರೆ ವಸ್ತುಗಳು ದೊರೆಯುತ್ತವೆ. ಹೊರಭಾಗದಲ್ಲಿ ಟೇಬಲ್ ಗಳಿದ್ದು ಜಾಲಿಯಾಗಿ ಊಟಮಾಡಬಹುದು.ಇಲ್ಲಿ ಸೇರಿಸಬೇಕಾದ ಮತ್ತೊಂದು ಮುಖ್ಯ ವಿಷಯವೆಂದರೆ ಈ ಬೀದಿಯಲ್ಲಿ ಬೇರೆಡೆಗಳಿಗಿಂತಲೂ ಅತಿ ಕಡಿಮೆ ದರದಲ್ಲಿ ಅಂದರೆ ಕೇವಲ 70 ರೂಪಾಯಿಗಳಲ್ಲಿ 'ಬೀಯರ್' ದೊರೆಯುತ್ತದೆ. ಇಲ್ಲಿಯ ತಂದೂರಿ ಲ್ಯಾಂಬ್ ಖಾದ್ಯವೂ ಕೂಡ ಪ್ರಖ್ಯಾತಿಯಾಗಿದೆ. ಯಾವುದೆ ಅಹಿತಕರ ಘಟನೆ ನಡೆಯದಿರಲು ಶಿಸ್ತುಬದ್ಧವಾದ 'ಬೌನ್ಸರ್' ಗಳಿರುವುದನ್ನು ನೋಡಬಹುದು.ವಾರದ ಬಹುದಿನಗಳಲ್ಲಿ ಪ್ರವೇಶ ಶುಲ್ಕವಿಲ್ಲದಿದ್ದರೂ ವಾರಾಂತ್ಯದಂದು ಸಾಮಾನ್ಯವಾಗಿ ಭಾರತೀಯರಿಗೆ ಶುಲ್ಕವಿರುವುದು ದುರದೃಷ್ಟ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಕೇಪ್ ಟಾವ್ನ್ ಸಮಯಕಳೆದಂತೆ ಜನದಟ್ಟಣೆ ಹೊಂದುವುದರಿಂದ, ಮುಂಚಿತವಾಗೇ ಇಲ್ಲಿಗೆ ಹೋಗುವುದು ಉತ್ತಮ. ವಾಹನವಿದ್ದಲ್ಲಿ ಪಾರ್ಕಿಂಗ್ ನ್ನು ಉತ್ತಮವಾದ ಜಾಗದಲ್ಲಿ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇನ್ನು ಇಲ್ಲಿ ಯಾವಾಗಲೂ ಜನಜಂಗುಳಿ ಇರುವುದರಿಂದ ಸರ್ವೀಸ್ ಕೂಡ ತಡವಾಗಿರುತ್ತದೆ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ, ಆದುದರಿಂದ ನಿಮ್ಮ ಆರ್ಡರ್ ನ್ನು ಮೊದಲೆ ಪ್ಲೇಸ್ ಮಾಡಿ, ಬರುವವರೆಗೂ ಡಿಜೆ ಸಂಗೀತವನ್ನು ಆಸ್ವಾದಿಸುತ್ತ ಸಹನೆಯಿಂದ ಕಾಯಿರಿ! ಬೇಕಾದಲ್ಲಿ ವಿ.ಐ.ಪಿ ಕೊಠಡಿಯೂ ಲಭ್ಯವಿದ್ದು ಹೆಚ್ಚಿನ ಹಣ ತೆರಬೇಕಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed