ಹೆಸರೇ ಸೂಚಿಸುವ ಹಾಗೆ ಸಿಖ್ ಯೋಧರು ಸರಗರಹಿ ಯುದ್ಧದಲ್ಲಿ ಮಾಡಿದ ತ್ಯಾಗ ಮತ್ತು ಬಲಿದಾನದ ಜ್ಞಾಪಕಾರ್ಥವಾಗಿ ಈ ಸರಗರಹಿ ಗುರುದ್ವಾರಾವನ್ನು ನಿರ್ಮಿಸಲಾಯಿತು. ವಿಶ್ವದ ಇತಿಹಾಸದಲ್ಲೇ ಹೆಚ್ಚು ಮಹತ್ವವನ್ನು ಹೊಂದಿರುವ ಈ ಕಾಳಗ ಸಿಖ್ ಸೈನಿಕರ ಧೀರೋತಾತ್ತ ಕಥೆಯನ್ನು ಸಾರುತ್ತದೆ. 1897ರಲ್ಲಿ ಪಠಾಣರ ವಿರುದ್ಧ ಸರಗರಹಿ ಕೋಟೆಯನ್ನು ಕಾಪಾಡಲು 36ನೇ ಸಿಖ್ ರೆಜಿಮೆಂಟ್‌ನ 21 ಸೈನಿಕರು ಪ್ರಾಣದ ಹಂಗು ತೊರೆದು ಸಾಯುವವರೆಗೆ ಹೋರಾಡಿ ಕೋಟೆಯನ್ನು ಕಾಪಾಡಿದರು.
ಪಂಜಾಬದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ಚಾರ್ಲ್ಸ್ ವಿವ್ಸ್ ಅವರು ಈ ಸ್ಮಾರಕವನ್ನು 1902 ರಲ್ಲಿ ಅಮೃತರಸದಲ್ಲಿ ಉದ್ಘಾಟಿಸಿದರು. ಸಿಖ್‌ರ ಧೀರತನಕ್ಕೆ ಸಾರ್ವಕಾಲಿಕ ದಾಖಲೆಯಾಗಿ ಹುತಾತ್ಮರಾದ 21 ಯೋಧರ ಹೆಸರುಗಳನ್ನು ಗೋಡೆಗೆ ಕೂಡಿಸಿರುವ ಅಮೃತಶಿಲೆಯ ಮೇಲೆ ಕೆತ್ತಿಸಲಾಗಿದೆ. ಸರಗರಹಿ ಕೋಟೆಯಿಂದ ತರಲಾದ ಕಲ್ಲುಗಳಿಂದ ಈ ಗೋಡೆಯನ್ನು ಕಟ್ಟಿಸಲಾಗಿದೆ.
ಪ್ರತಿವರ್ಷ 12ನೇ ಸೆಪ್ಟೆಂಬರ್ ರಂದು ಧಾರ್ಮಿಕ ಹಾಗು ನಿವೃತ್ತ ಅಧಿಕಾರಿಗಳು ಸೇರುವ ಸಭೆಗೆ ಈ ಗುರುದ್ವಾರ ಸಾಕ್ಷಿಯಾಗುತ್ತದೆ. ಹೀಗೆ ಇದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ ಮತ್ತು ಪ್ರವಾಸಿಗರಿಗೆ ಭೇಟಿ ಕೊಡಲು ಇದು ಸೂಕ್ತವಾದ ಪ್ರವಾಸಿತಾಣವಾಗಿದೆ.


Click it and Unblock the Notifications