ಗೋಡೆಗಳಿಂದ ಸುತ್ತವರಿದಿರುವ ಅಮೃತಸರ ನಗರದ ಆಗ್ನೇಯ ಮೂಲೆಯಲ್ಲಿ ಗುರುದ್ವಾರಾ ರಾಮಸರ ಸಾಹೀಬ್ ನೆಲೆನಿಂತಿದೆ. ಇತರ ಗುರುದ್ವಾರಗಳಂತೆ ಈ ಗುರುದ್ವಾರವೂ ಸಹ ಪವಿತ್ರ ರಾಮಸರ ಸರೋವರದ ತಟದಲ್ಲಿಯೇ ಉಪಸ್ಥಿತವಿದೆ. ಅಮೃತಸರದ 5 ಪವಿತ್ರ ಸರೋವರಗಳಲ್ಲಿ ರಾಮಸರ ಸರೋವರ ಬಹಳ ಚಿಕ್ಕದು. ಈ ಸರೋವರವನ್ನು ಅಗೆದದ್ದು 5ನೇ ಸಿಖ್ ಗುರುವಾದ ಗುರು ಅರ್ಜುನ್ ದೇವಜಿ ಅವರು. ತಮ್ಮ ಪರಮಾನಂದದ ಸ್ಥಾನದ ಹುಡುಕಾಟದಲ್ಲಿ ಈ ಸರೋವರವನ್ನು ಗುರುಗಳು ಅಗೆಸಿದ್ದರು.
ಇವರ ತಂದೆ(ಗುರು ರಾಮದಾಸಜಿ)ಯ ನೆನಪಿನಲ್ಲಿ ಹೆಸರಿಸಲಾದ ಈ ಗುರುದ್ವಾರಾದಲ್ಲಿ ಪವಿತ್ರ ಗುರು ಗ್ರಂಥ ಸಾಹೀಬ್ ಇದೆ. ಇದು ಎಲ್ಲಾ ಸಿಖ್ ಗುರುಗಳ ಅವಶೇಷಗಳನ್ನು ಹೊಂದಿದೆ. ಇದರ ಬೋಧನೆಯನ್ನು ಮೊಟ್ಟಮೊದಲ ಬಾರಿಗೆ ಸಿಖ್ ಪರಿವಾರದವರಿಗೆ ಇದೇ ಸ್ಥಳದಲ್ಲಿ ಆಜ್ಞಾಪಿಸಿದ್ದು. ಗುರುದ್ವಾರಾದ ನಿರ್ಮಾಣ ಮುಕ್ತಾಯವಾದ ಮೇಲೆ ಸಿಖ್‌ರ ಈ ಪವಿತ್ರ ಗ್ರಂಥವನ್ನು ಹರಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ಅಮೃತಶಿಲೆಯ ನೆಲವನ್ನು ಹೊಂದಿರುವ ದೊಡ್ಡ ಹಾಲ್‌ನ ಉಚ್ಚ ಸ್ಥಾನದಲ್ಲಿ ಕಮಲದಾಕಾರದ ಗುಮ್ಮಟವಿರುವ ಈ ಗುರುದ್ವಾರಾಕ್ಕೆ ಪ್ರವಾಸ ಕೈಗೊಳ್ಳದೆ ಬಿಡಬೇಡಿ.


Click it and Unblock the Notifications