ಶ್ರೀ ಭಕ್ತಿಧಾಮ ದೇವಾಲಯವು ಅಮ್ರಾವತಿಯ ಪ್ರಮುಖ ದೇವಾಲಯವಾಗಿದೆ. ಇದು ಅಮ್ರಾವತಿಯ ಬಡ್ನೆರ ರಸ್ತೆಯಲ್ಲಿ ಸಿಗುತ್ತದೆ. ಶ್ರೀ ಭಕ್ತಿಧಾಮ ದೇವಾಲಯವು ಶ್ರೀ ಕೃಷ್ಣ ಮತ್ತು ಆತನ ಸತಿ ರಾಧೆಯರ ಸುಂದರ ಮೂರ್ತಿಗಳನ್ನು ಹೊಂದಿದೆ. ಇದರ ಜೊತೆಗೆ ಶ್ರೀ ಸಂತ ಜಲರಾಮ್ ಬಪ್ಪಾರ ಪವಿತ್ರ ಬೃಂದಾವನವನ್ನೂ ಸಹ ಇಲ್ಲಿ ಕಾಣಬಹುದು.
ಈ ದೇವಾಲಯದ ಹಿಂಭಾಗದಲ್ಲಿರುವ ಉದ್ಯಾನವನವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಲಾಗಿದ್ದು, ಮಕ್ಕಳ ನಡುವೆ ಇದು ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಟ್ಯಾಕ್ಸಿ, ಆಟೋ ರಿಕ್ಷಾ ಮತ್ತು ಟಾಂಗಾಗಳ ಮೂಲಕ ತಲುಪಬಹುದು.


Click it and Unblock the Notifications