Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮ್ರಾವತಿ » ಹವಾಮಾನ

ಅಮ್ರಾವತಿ ಹವಾಮಾನ

ಅಮ್ರಾವತಿಯಲ್ಲಿ ಸಮಶೀತೋಷ್ಣ ಹವಾಗುಣವಿದೆ. ನೀವು ಇಲ್ಲಿನ ಉಷ್ಣಾಂಶದಲ್ಲಿ ವಿಪರೀತವಾದ ಏರುಪೇರುಗಳನ್ನು ಕಾಣಬಹುದಾಗಿದೆ. ಆದರು, ಚಳಿಗಾಲವು ಇಲ್ಲಿಗೆ ಭೇಟಿಕೊಡಲು ಉತ್ತಮ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಅಮ್ರಾವತಿಯಲ್ಲಿ ಅತ್ಯಂತ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ.  ಈ ಪ್ರಾಂತ್ಯದಲ್ಲಿ ಮಾರ್ಚ್ ನಿಂದ ಮೇ ವರೆಗಿನ ಕಾಲ ಅತ್ಯಂತ ಒಣ ಹವೆಯಿಂದ ಕೂಡಿರುತ್ತದೆ. ಈ ಕಾಲದಲ್ಲಿ ಉಷ್ಣಾಂಶವು 32° ಸೆಲ್ಶಿಯಸ್ ನಿಂದ  40°ಸೆಲ್ಶಿಯಸ್ ವರೆಗೆ ಏರಿಳಿಯುತ್ತಿರುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಪ್ರವಾಸ ಹೊರಡುವ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

ಮಳೆಗಾಲ

ಅಮ್ರಾವತಿ ನಗರದಲ್ಲಿ ಮಳೆಗಾಲವು ಅಂದಾಜು ಮೂರರಿಂದ ನಾಲ್ಕು ತಿಂಗಳ ಕಾಲ ಇರುತ್ತದೆ. ಸಾಮಾನ್ಯವಾಗಿ ಜೂನ್ ನಿಂದ ಅಕ್ಟೋಬರ್ ವರೆಗೆ ಇರುತ್ತದೆ. ಈ ಋತುವಿನಲ್ಲಿ, ಈ ಪ್ರಾಂತ್ಯದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಪರಿಣಾಮವಾಗಿ ತಕ್ಕಮಟ್ಟಿಗೆ ಉತ್ತಮವಾದ ಮಳೆಯಾಗುತ್ತದೆ. ಅನೇಕ ಚಂಡಮಾರುತಗಳು, ಅಲ್ಪ ಪ್ರಮಾಣ ವಾಯುಭಾರ ಕುಸಿತಗಳನ್ನು ನಾವು ಈ ಕಾಲದಲ್ಲಿ ಕಾಣಬಹುದು.

ಚಳಿಗಾಲ

ಚಳಿಗಾಲವು ಅಮ್ರಾವತಿಯಲ್ಲಿ ಹಿತವಾದ, ತಂಪಾದ ಹವಾಗುಣವನ್ನು ಹೊಂದಿರುತ್ತದೆ. ಮಧ್ಯ ಅಕ್ಟೋಬರ್ ನಿಂದ ಮಾರ್ಚ್ ವರೆಗು ಇರುವ ಚಳಿಗಾಲವು ಇಲ್ಲಿನ ಉಷ್ಣಾಂಶವನ್ನು 15°ಸೆಲ್ಶಿಯಸ್ ವರೆಗು ಕುಸಿಯುವಂತೆ ಮಾಡುತ್ತದೆ. ಈ ಕಾಲದಲ್ಲಿ ಉಷ್ಣಾಂಶವು 24°ಸೆಲ್ಶಿಯಸ್ ನಿಂದ  32° ಸೆಲ್ಶಿಯಸ್ ವರೆಗೆ ಇರುತ್ತದೆ. ಹವಾಮಾನ ಆಹ್ಲಾದಕರವಾಗಿರುವುದರಿಂದಾಗಿ ಇಲ್ಲಿಗೆ ಭೇಟಿ ಕೊಡಲು ಈ ಕಾಲ ಅತ್ಯುತ್ತಮ ಅವಧಿಯಾಗಿದೆ. ಇಲ್ಲಿ ಈ ಕಾಲದಲ್ಲಿ ಅನಿರೀಕ್ಷಿತವಾದ ಅಲ್ಪಮಟ್ಟಿಗಿನ ಮಳೆಯನ್ನು ಸಹ ಕಾಣಬಹುದಾಗಿದೆ.