ಮಾರ್ತಾಂಡ ವರ್ಮ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಶಿವ ದೇವಾಲಯವು ಉಪನದಿಯಾದ ಮಂಗಳಪುಳಾ ಹಾಗೂ ಪೆರಿಯಾರ್ ನದಿಯ ನಡುವೆ ಇರುವ ಮರಳಿನ ರಾಶಿಯಲ್ಲಿ ನೆಲೆಗೊಂಡಿದೆ. ಇಲ್ಲಿರುವ ಮಹಾದೇವ ದೇವಾಲಯ (ಶಿವನ ದೇವಾಲಯ) ಪ್ರಸಿದ್ಧವಾಗಿದ್ದು, ಇದು ದೇವಾಲಯದ ಒಳಗೆ ಅನುಸ್ಥಾಪಿತಗೊಂಡಿಲ್ಲ ಎಂಬುದು ಇಲ್ಲಿಯ ವಿಶೇಷ. ಇದನ್ನು ಶ್ರೀರಾಮನು ಸ್ವತಃ ಪ್ರತಿಷ್ಠಾಪಿಸಿ ಪೂಜಿಸಿದನೆಂದು ಪ್ರತೀತಿ ಇದೆ. ಇಲ್ಲಿ ಬಲರಾಮ ದೇವಾಲಯ, ಅಯ್ಯಪ್ಪ ದೇವಾಲಯ ಹಾಗೂ ಅದ್ವ್ವೆತ ಆಶ್ರಮ, ಶ್ರೀ ಕೃಷ್ಣ ದೇವಾಲಯ ಸೇರಿದಂತೆ ಇತರ ದೇವಾಲಯಗಳಿವೆ. ಇಲ್ಲಿಯ ಮಹಾಶಿವರಾತ್ರಿ ಹಬ್ಬ ಹಾಗೂ ಅಲುವಾ ದಲ್ಲಿರುವ ಅರಮನೆಯ ವಾಸ್ತುಶಿಲ್ಪ ಕೂಡ ಪ್ರಸಿದ್ಧವಾದ ಆಕರ್ಷಣೆಗಳಾಗಿವೆ.


Click it and Unblock the Notifications