ವಿಶ್ವದಲ್ಲೇ ಅತ್ಯಂತ ಪ್ರಮುಖ ಮತ್ತು ದೊಡ್ಡ ಸೆಮಿನರಿ ಚರ್ಚ್ ಗಳಲ್ಲಿ ಮಂಗಳಪುಳಾದ ಸೇಂಟ್ ಜೋಸೆಫ್ ಪಾಂಟಿಫಿಕಲ್ ಸೆಮಿನರಿ ಚರ್ಚ್ ಕೂಡ ಒಂದು. 1994 ರಲ್ಲಿ ಪಾಂಟಿಫಿಕಲ್ ಚರ್ಚ್ ಎಂದು ವಿಶೇಷವಾಗಿ ಕರೆಯಲಾಯಿತು. ಇದು ಕ್ಯಾಥೊಲಿಕ್ ಪಂಥಿಯ ಮತ ಧರ್ಮಶಾಸ್ತ್ರದ ಶಿಕ್ಷಣ ಸಂಸ್ಥೆಯಾಗಿದ್ದು, 1932 ರಲ್ಲಿ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಹಾಗೂ 1996 ರಿಂದ ಮಲಬಾರ್ ಕ್ಯಾಥೊಲಿಕ್ ನ ಪ್ರಮುಖ ಸೆಮಿನರಿ ಚರ್ಚ್ ಆಗಿ ಹೆಸರುವಾಸಿಯಾಯಿತು.
ಈ ಸಂಸ್ಥೆಯು ಪದವಿ, ಫಿಲಾಸಫಿ ಶಿಕ್ಷಣ, ಥಿಯಾಲಜಿ ಹಾಗೂ ದೇವತಾಶಾಸ್ತ್ರದ ಪಿಎಚ್ ಡಿ ಶಿಕ್ಷಣಿಕೆಗೆ ಪ್ರಸಿದ್ಧವಾಗಿದ್ದು ಏಳು ಬ್ಯಾಚ್ ಗಳು ಹಾಗೂ 263 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಅಪರೂಪದ ಕ್ರಿಶ್ಚಿಯನ್ ಸಾಹಿತ್ಯದ ಬೃಹತ್ ಗ್ರಂಥಾಲಯ ಮತ್ತು ಶಾಂತಿಯುತ ಧ್ಯಾನ ಮಂದಿರ ಸೆಮಿನರಿ ಚರ್ಚ್ ನ ಪ್ರಮುಖ ಆಕರ್ಷಣೆಗಳು.


Click it and Unblock the Notifications