ನಂದಾ ದೇವಿ ದೇವಾಲಯವು, ಅಲ್ಮೋರಾದಲ್ಲಿರುವ ಹೆಸರಾಂತ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯ ಬೃಹತ್ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಕುಮೌನಿ ಪ್ರದೇಶದ ಪವಿತ್ರ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ದೇವಾಲಯದ ಇತಿಹಾಸ ಹೆಚ್ಚು ಕಮ್ಮಿ1000 ವರ್ಷಗಳ ಹಿಂದಿನದು ಎಂದು ಗುರುತಿಸಬಹುದು. ಈ ದೇವಸ್ಥಾನದಲ್ಲಿ ಚಂದ್ ವಂಶದ ಕುಲ ದೇವತೆಯನ್ನು ಪೂಜಿಸಲಾಗುತ್ತದೆ.
ಈ ದೇವಸ್ಥಾನವನ್ನು ಕುಮೌನಿ ವಾಸ್ತುಶಿಲ್ಪದ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ದೇವಾಲಯದಲ್ಲಿನ ವಿಗ್ರಹವನ್ನು ಅಮಲಕ ಕಲ್ಲಿನ ಕಿರೀಟದಿಂದ ಅಲಂಕರಿಸಲಾಗಿದ್ದು, ಮರದ ಛಾವಣಿಯಿಂದ ಆವರಿಸಿದೆ. ದೇವಾಲಯದ ಗೋಡೆಗಳನ್ನು ಆಕರ್ಷಕ ಕಲ್ಲು ಕಲೆಯಿಂದ ವಿನ್ಯಾಸಗೊಳಿಸಲಾಗಿದೆ. ಪ್ರತಿ ವರ್ಷ ಇಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ, ಆಯೋಜಿಸಲಾಗುವ ನಂದಾ ದೇವಿ ಜಾತ್ರೆ, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.


Click it and Unblock the Notifications